ಸಿಎಂ ಭಾವಚಿತ್ರಕ್ಕೆ ಕ್ಷೀರಾಭಿಷೇಕ

ಹುಬ್ಬಳ್ಳಿ,ನ19-ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊರಡಿಸಿದ ಆದೇಶವನ್ನು ಸ್ವಾಗತಿಸಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಗರದ ದುರ್ಗದಬೈಲ್ ವೃತ್ತದಲ್ಲಿ ಯಡಿಯೂರಪ್ಪನವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಚನ್ನಯ್ಯ ಚೌಕಿಮಠ ಮಾತನಾಡಿ ನಿಗಮ ಸ್ಥಾಪನೆಯಿಂದ ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರಿಗೆ ಅನುಕೂಲವಾಗಲಿದೆ. ಹಲವಾರು ದಿನಗಳಿಂದ ನಿಗಮ ಸ್ಥಾಪನೆಗೆ ಬೇಡಿಕೆ ಇತ್ತು. ಇದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು ನಿಗಮವನ್ನು ಸ್ಥಾಪಿಸಿದ್ದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಚನ್ನಯ್ಯ ಚೌಕಿಮಠ, ಪ್ರಭು ನವಲಗುಂದಮಠ, ಅಜೇಯ ಹಿರೇಮಠ, ವೀರಯ್ಯಸ್ವಾಮಿ ಸಾಲೀಮಠ, ಲೋಕೇಶ ಗುಂಜಾಳ, ರಾಜು ಕೋರ್ಯಾಣಮಠ, ವೀರಣ್ಣ ಹಿರೇಹಾಳ, ಮಹಾಂತೇಶ ಗಿರಿಮಠ, ಜಯದೇವಯ್ಯ ಹಿರೇಮಠ, ಬಸವರಾಜ ಇಚ್ಚಂಗಿ, ಬಸವರಾಜ ಜಾಬಿನ, ಷಣ್ಮುಖಯ್ಯ ಪಂಚಾಂಗಮಠ, ಶಂಭು ಲಕ್ಷ್ಮೇಶ್ವರಮಠ, ರವಿ ಅಣ್ಣಿಗೇರಿ ಮತ್ತಿತರರು ಉಪಸ್ಥಿತರಿದ್ದರು.