ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿಬಿಜೆಪಿ ಸೇರಿದ ಮಹೇಶ್ವರಸ್ವಾಮಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30: ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಉಪಾಧ್ಯಕ್ಷರು, ಪ್ರಸ್ತುತ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ. ಕನ್ನಡಪರ, ಜನಪರ ಮತ್ತು ರೈಲ್ವೆ ಪರ ಹೋರಾಟಗಾರರಾಗಿವ ಕೆ.ಎಂ.   ಮಹೇಶ್ವರ ಸ್ವಾಮಿ ಅವರು ತಮ್ಮ ಬೆಂಬಲಿಗರೊಂದಿಗೆ  ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಅವರ ಸಮ್ಮುಖದಲ್ಲಿ  ನಿನ್ನೆ ಸಂಜೆ ಭಾರತೀಯ ಜನತಾ ಪಕ್ಷವನ್ನು ಸೇರಿದರು.
ಮುಖ್ಯಮಂತ್ರಿಗಳು ಪಕ್ಷದ ಶಾಲು ಹೊದಿಸುವ ಮೂಲಕ ಮಹೇಶ್ವರ ಸ್ವಾಮಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.  ಈ ಸಂದರ್ಭದಲ್ಲಿ  ನಗರ ಶಾಸಕ ಹಾಗೂ  ಬಿಜೆಪಿ ಪಕ್ಷದ ಅಭ್ಯರ್ಥಿ  ಜಿ. ಸೋಮಶೇಖರ ರೆಡ್ಡಿ ಲೋಕಸಭಾ ಸದಸ್ಯ,  ವೈ. ದೇವೇಂದ್ರಪ್ಪ, ಭಾಜಪ ಜಿಲ್ಲಾ ಅಧ್ಯಕ್ಷ ಗೋನಾಳ್  ಮುರಹರಗೌಡ  ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಇವರು ಉಪಸ್ಥಿತರಿದ್ದರು
ರೋಡ್ ಶೋ ವಾಹನದ ವೇದಿಕೆಯಲ್ಲಿ ಸಾವಿರಾರು ಜನರ ಸಮಕ್ಷಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ  ಸ್ವಾಮಿಯವರು ಮಾತನಾಡಿ ಬಳ್ಳಾರಿ ಸೇರಿದಂತೆ ಕರ್ನಾಟಕ ರಾಜ್ಯದ ರೈಲ್ವೆ ಅಭಿವೃದ್ಧಿ ಪಡಿಸುವ ಹಿನ್ನಲೆಯಲ್ಲಿ ಭಾಜಪ ಸೇರ್ಪಡೆಯಾಗಿರುವುದಾಗಿ ತಿಳಿಸಿದರು ಮತ್ತು ಉತ್ತಮ ಕೆಲಸ ಮಾಡಿರುವಂತಹ ರಾಜ್ಯದ ಬಿಜೆಪಿ ಪಕ್ಷವನ್ನು ಪುನರಾಯ್ಕೆ ಮಾಡುವಂತೆ ಕೋರಿದರು
 ಸರಳ ಜೀವಿ ಸದಾ ಜನತೆ ಹಿತಕ್ಕಾಗಿ ದುಡಿಯುವ ಗಾಲಿ ಸೋಮಶೇಖರ್ ರೆಡ್ಡಿ ಅವರನ್ನು ಪುನಃ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು