ಸಿಎಂ ಬೆಂಗಾವಲಿಗೆ ಹೋಗಿದ್ದ ಪೊಲೀಸ್ ಜೀಪ್ ಪಲ್ಟಿ ಚಾಲಕನಿಗೆ ಗಾಯ

ಚಿಕ್ಕಮಗಳೂರು,ನ.6- ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಖ್ಯಮಂತ್ರಿ‌‌ ಯಡಿಯೂರಪ್ಪ ಅವರ ಬೆಂಗಾವಲು ವಾಹನವಾಗಿ ಹೋಗಿದ್ದ ಜಿಲ್ಲಾ ಸಶಸ್ತ್ರ ದಳದ ಪೊಲೀಸ್ ಜೀಪ್ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ತಾಲೂಕಿನ ಜೇನುಗದ್ದೆ ಬಳಿ ನಡೆದಿದೆ.
ಬಿಜೆಪಿ ಕಾರ್ಯಕಾರಣಿ ಸಭೆಗೆ ಮುಖ್ಯಮಂತ್ರಿ‌‌ಗಳು ಆಗಮಿಸಿದ್ದ ಹಿನ್ನೆಲೆಯಲ್ಲಿ ಬಂದೋಬಸ್ತ್ ಗಾಗಿ ಚಿಕ್ಕಮಗಳೂರಿನಿಂದ ಪೊಲೀಸ್ ವಾಹನ ಹೋಗಿತ್ತು.ಕಾರ್ಯಕ್ರಮ ಮುಗಿಸಿ ವಾಹನ ಇಂದು ಚಿಕ್ಕಮಗಳೂರಿಗೆ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ.
ಮಂಗಳೂರಿನಿಂದ ವಾಪಸ್ಸಾಗುವ ವೇಳೆ ಪೊಲೀಸ್ ಜೀಪ್ ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಗ್ರಾಮದ ಬಳಿ ಬರುತ್ತಿದ್ದಂತೆ ಜೀಪಿನ ಬ್ರೇಕ್ ಜಾಮ್ ಆದ ಪರಿಣಾಮ ಜೀಪ್ ಪಲ್ಟಿಯಾಗಿದೆ. ಜೀಪಿನಲ್ಲಿ ಚಾಲಕ ನನ್ನ ಹೊರತುಪಡಿಸಿ ಬೇರೆ ಯಾವುದೇ ಸಿಬ್ಬಂದಿ ಇರಲಿಲ್ಲ. ಜೀಪ್ ಪಲ್ಟಿಯಾದ ಹಿನ್ನೆಲೆ ಚಾಲಕ ಶರತ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಚಾಲಕ ಶರತ್ ನನ್ನ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.