ಸಿಎಂ ಬಿಎಸ್‌ವೈಗೆ ಜೈಕಾರ ಹಾಕಿದ ಮಹಿಳಾ ಘಟಕ

ದಾವಣಗೆರೆ.ನ.೧೮; ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಹಿನ್ನಲೆಯಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದಿಂದ ನಗರದ ರಾಂ ಅಂಡ್ ಕೋ ಸರ್ಕಲ್ ನಲ್ಲಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಣೆ ಮಾಡಲಾಯಿತು.

ಬಿಎಸ್ ವೈ ಹಾಗೂ ಶಾಮನೂರು ಶಿವಶಂಕರಪ್ಪ ಭಾವ ಚಿತ್ರ ಹಿಡಿದು ಮಹಿಳಾ ಘಟಕದ ಸದಸ್ಯರುವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷರಾದ ಉಮಾ ಎಂ.ಪಿ. ರಮೇಶ್, ಜಿಲ್ಲಾ ಅಧ್ಯಕ್ಷರಾದ ದೇವರಮನಿ ಶಿವಕುಮಾರ್, ಮಹಿಳಾ ಪ್ರದಾನ ಕಾರ್ಯದರ್ಶಿ ದ್ರಾಕ್ಷಾಯಣಿ,ರಾಷ್ಟ್ರೀಯ ಉಪಾಧ್ಯಕ್ಷರಾದ ವಿನುತ ರವಿ,ಶೋಭಾ ಕೊಟ್ರೇಶ್,ಅಶ್ವಿನಿ ಪ್ರಶಾಂತ,ದ್ರಾಕ್ಷಯಣಿಯಮ್ಮ ಮಲ್ಲಿಕಾರ್ಜುನ್,ಮಂಜುಳಾ ಮಹೇಶ್, ನಾಗರಾತ್ನ,ರೂಪಾ ಗುರು, ಮಂಗಳಾ,ಸುನೀತಾ,ರೇಖಾ,ಸುಮಾ,ಜೋತಿ ಬಸಪ್ಪ,ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ.ಪಾಟೀಲ. ಸೋಗಿ ಶಾಂತಕುಮಾರ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.