ಸಿಎಂ ಚಾರಿತ್ರ್ಯಹರಣ ಕೃತ್ಯಕ್ಕೆ ತೀವ್ರ ಖಂಡನೆ

ಕಲಬುರಗಿ ಸೆ 22: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವಿರುದ್ಧ ಕೆಲವು ಕಿಡಿಗೇಡಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ವೀರಶೈವ ಲಿಂಗಾಯತ ಸಮುದಾಯ ಹಾಗೂ ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗ ಖಂಡಿಸುತ್ತದೆ ಎಂದು ಬಳಗದ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೇಸಿಎಂ ಎಂಬ ಪೆÇೀಸ್ಟರ್ ಎಲ್ಲೆಂದರಲ್ಲಿ ಅಂಟಿಸುವ ಮೂಲಕ ವೀರಶೈವ ಲಿಂಗಾಯತ ಸಮುದಾಯದ ನಾಯಕನ ಹೆಸರಿಗೆ ಮಸಿ ಬಳಿಯುವ ಕೆಲಸ ಯಾರೇ ಮಾಡಿದ್ದರೂ ಮುಖ್ಯಮಂತ್ರಿಗಳ ಹಾಗು ವೀರಶೈವ ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಇದನ್ನು ಖಂಡಿಸಿ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ, ಸಮುದಾಯದ
ಮುಖಂಡರೊಂದಿಗೆ ಕಲಬುರಗಿಯಿಂದ ಬೆಂಗಳೂರು ವಿಧಾನಸೌದದ ವರೆಗೆ ಪಾದಯಾತ್ರೆ ಮಾಡುವ ಮೂಲಕ ವೀರಶೈವ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗೆ ಧೈರ್ಯ ತುಂಬುವದಷ್ಟೆ ಅಲ್ಲದೆ ನಮ್ಮ ಸಮುದಾಯದ ನಾಯಕನ ಹೆಸರಿಗೆ ಕಳಂಕ ತರುತ್ತಿರುವ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಪಾಠ ಕಲಿಸಲು ಸಮಾಜ ಜಾಗೃತಿ ಪಾದಯಾತ್ರೆ ಮಾಡುವ ಮೂಲಕ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲ ಸಮಾಜದ ಬಗ್ಗೆ ಅಪಾರವಾದ ಕಾಳಜಿವಹಿಸಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಾರಿತ್ರ್ಯಹರಣ ಮಾಡುತ್ತಿರುವುದು ಖಂಡನೀಯ.ಇದಲ್ಲೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಇದರ ಹಿಂದೆ ಇರುವ ಕಾಣದ ಕೈಗಳಿಗೆ ಮುಂದಿನ ದಿನಗಳಲ್ಲಿ ಸಮಾಜದಿಂದಲೇ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಜಿ ಕೆ ಶಿವಾಜಿ ಚಂದ್ರಕಾಂತ ಕಾಳಗಿ ಇದ್ದರು