ಸಿಎಂ ಗೆ ಸ್ವಂತ ಬುದ್ದಿ ಇದ್ದರು ವಿವೇಚನೆ ಇಲ್ಲ; ಮುಖ್ಯ ಮಂತ್ರಿ ಚಂದ್ರು ವಾಗ್ದಾಳಿ

ದಾವಣಗೆರೆ.ಮಾ.೪; ಕಳೆದ ೧೦ ವರ್ಷಗಳ ಹಿಂದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರ ಫಲವಾಗಿ ದೆಹಲಿ ಹಾಗೂ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಆಮ್ ಆದ್ಮಿ‌ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದರು.ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದಿಂದ ಹಮ್ಮಿಕೊಂಡಿರುವ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೂ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಅವರು‌ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿದೆ ಎಂದರು. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉದ್ದಟತನದಿಂದ ವರ್ತಿಸುತ್ತಿದ್ದಾರೆ.ಚುನಾವಣೆ ಹತ್ತಿರ ಸಮೀಪಿಸುತ್ತಿದೆ. ಆದರೂ ಇಷ್ಟು ಉದ್ದಟನ ಆಡಳಿತ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿರಿಮೋಟ್ ಕಂಟ್ರೋಲ್ ಸಿ.ಎಂ. ಪ್ರಧಾನಿ ಮೋದಿ,ಅಮಿತ್ ಶಾ ಆದೇಶ ಪಾಲನೆ ಮಾಡಬೇಕು.ಅಲ್ಲದೇ ಮಾಜಿ ಸಿಎಂ ಯಡಿಯೂರಪ್ಪ,  ಆರ್.ಆರ್.ಎಸ್ ಆದೇಶವನ್ನೂ ಪಾಲನೆ ಮಾಡಬೇಕೆಂದರು.ಸಿಎಂ ಬಸವರಾಜ್ ಬೊಮ್ಮಾಯಿಗೆ  ಮಾತನಾಡಲು ಸ್ವಂತ ಬುದ್ದಿಯಿಲ್ಲ. ಸ್ವಂತ ಬುದ್ದಿ ಇದ್ದರು ವಿವೇಚನೆ ಇಲ್ಲ. ಅಧಿಕಾರಿ ಮಾಡೋ ಹಾಗೆ ಇಲ್ಲ.ಅವರದ್ದೇ ಆಡಳಿತ ಇದ್ದರು, ಪ್ರಯೋಜನ ಇಲ್ಲ ಎಂಬಂತಾಗಿದೆ ಎಂದು ವಾಗ್ದಾಳಿ ಮಾಡಿದರು. ರಾಜ್ಯ ಸರ್ಕಾರದ ಸಚಿವ ಮಾಧುಸ್ವಾಮಿ ನಮ್ಮ ಸರ್ಕಾರ ಸತ್ತುಹೋಗಿದೆ ಎಂದು ಹೇಳುತ್ತಾರೆ. ಈಗ ಕಣ್ಣೆದುರಿಗೆ ಮಾಡಾಳು ವಿರೂಪಾಕ್ಷಪ್ಪ ಹಾಗೂ ಪುತ್ರನ ದಂಧೆ ಹೊರ ಬಿದ್ದಿದೆ.ಕೋಟಿ ಕೋಟಿ ಹಣ ಸಿಕ್ಕಿದೆ. ಚಿನ್ನಾಭರಣ ಸಿಕ್ಕಿದೆ.ಇಷ್ಟೇಲ್ಲಾ ಸಿಕ್ಕರೂ ಸಾಕ್ಷಿ ಬೇಕು ಎನ್ನುತ್ತಾರೆ. ಅಮಿತ್ ಶಾ ರಾಜ್ಯದಲ್ಲಿ ಚುನಾವಣೆಗೋಸ್ಕರ್ ಕಳ್ಳ ಹಣ ಸಂಗ್ರಹ ಮಾಡಲು ಬರುತ್ತಿದ್ದಾರೆಯೇ ಎಂದು ವ್ಯಂಗ್ಯವಾಡಿದರು.ಅವರಿಗೆ ಯಾವುದೇ ಅಭಿವೃದ್ಧಿ ಬೇಕಾಗಿಲ್ಲ. ಕೇವಲ 40% ಸರ್ಕಾರ  ಅಲ್ಲ ಇದು ಪೂರ್ಣ 100 % ಕಮೀಷನ್  ಸರ್ಕಾರವಾಗಿದೆ.ಒಂದೇ ಬಿಲ್ ಗೆ ನಾಲ್ಕು ನಾಲ್ಕು ಸಾರಿ ಹಣ ತೆಗೆದುಕೊಂಡಿದ್ದಾರೆ.ಎಷ್ಟೋ ಕಡೆ ರಸ್ತೆ ಇಲ್ಲ. ದಾಖಲೆ ಸೃಷ್ಟಿ ಮಾಡಿ ಹಣ ಲೂಟಿ ಮಾಡಿದ್ದಾರೆ.ಇದೇ ವಿಚಾರವನ್ನ ಜನರಿಗೆ ಮಾಹಿತಿ ನೀಡಲು ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್ ಬರುತ್ತಿದ್ದಾರೆಂದರು.ಈ ವೇಳೆ ಆಮ್ ಆದ್ಮಿ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ಮುಖಂಡರು ಉಪಸ್ಥಿತರಿದ್ದರು.