ಸಿಎಂ ಗೆ ಮನವಿ ಸಲ್ಲಿಕೆ- ನುಕ್ಕುನುಗ್ಗಲು !

ಆಲಮಟ್ಟಿ : ಸೆ.3:ಕೃಷ್ಣೆಯ ಒಡಲಿಗೆ ಬಾಗಿನ ಸಲ್ಲಿಸಲು ಆಗಮಿಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಲು ಸಂಘ,ಸಂಸ್ಥೆಗಳ ಮುಖಂಡರು ಪರಿತಪ್ಪಿಸಿದರು.
ಮುಖ್ಯ ಮಂತ್ರಿಗಳು ಅಹವಾಲು, ಮನವಿ ಸ್ವೀಕರಿಸಲು ಮುಂದಾದಾಗ ವಿಪರೀತ ನುಗ್ಗುನುಗ್ಗಲು ಉಂಟಾಯಿತು. ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆಗಾಗಿ ಸಂಘಟನೆಗಳ ಪ್ರಮುಖರು ನಾ ಮುಂದು ತಾ ಮುಂದು ಎಂದು ತಡಕಾಡಿದರು. ಇದರಿಂದ ಕ್ಷಣ ಹೊತ್ತ ಸಿಎಂ ಇರಿಸು ಮುರಿಸುಗೊಂಡರು. ಈ ವೇಳೆ ಪೆÇೀಲಿಸರು ಹರಸಾಹಸ ಪಡಬೇಕಾಯಿತು. ವ್ಯಾಪಕವಾಗಿ ಮನವಿ ಸಲ್ಲಿಸುವ ಉನ್ಮಾನದ ಸುರಿಮಳೆ ಉಂಟಾಗಿ ಮುಜುಗರಕ್ಕೆ ಕಾರಣವಾಯಿತು. ಈ ಮಧ್ಯೆ ಸಂಘಟನೆಗಳ ಮುಖಂಡರಲ್ಲಿ ತಮ್ಮ ಅಳಲಿನ ಮನವಿ ದೊರೆಗೆ ಸಲ್ಲಿಸಿದ ತೃಪ್ತಿ ಭಾವದಲ್ಲಿ ಜಾಗ ಖಾಲಿ ಮಾಡಿ ಖುಷಿಯಿಂದ ಕಾಲ್ಕಿತ್ತರು.