ಸಿಎಂ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಸಚಿವ ನಿರಾಣಿ

ವಿಜಯಪುರ, ಮೇ.05-ಮುಖ್ಯಮಂತ್ರಿ ಯಡಿಯೂರಪ್ಪ ನವರು 79 ವಯಸ್ಸಿ ನಲ್ಲಿಯೂ ಸಹಿತ ಉತ್ತಮ ಕೆಲಸ ಮಾಡುತ್ತಿದ್ದಾರೆ ಹಾಗೂ ಹಗಲು ರಾತ್ರೀ ಕೆಲಸ ಮಾಡು ತ್ತಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಶ್ಲಾಘಿಸಿದರು.
ವಿಜಯಪುರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಮುರುಗೇಶ ನಿರಾಣಿಯವ್ರು ಸಿ ಎಂ ಅವರಿಗೆ ವಯ್ಯಸ್ಸಾದ ಕಾರಣ ಅವರು ಎಲ್ಲೆಡೆ ಈ ಪರಿಸ್ಥಿತಿಯಲ್ಲಿ ಓಡಾಡಬೇಕು ಎಂದಿಲ್ಲ. ಒಂದೆಡೆ ಕುಳಿತು ಸಮಸ್ಯೆಯನ್ನು ಪರಿಹರಿ ಸುವದು ಸಿ ಎಂ ಅವರ ಕೆಲಸವಾಗಿದೆ.
ಪ್ರತಿ ದಿನ ಮೂರು ಹೊತ್ತು ಅವರ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿದ್ದಾರೆ ಎಂದರು. ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ ಮೂಲಕ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.