ಸಿಎಂ ಇಬ್ರಾಹಿಂ ಸಹಾಯ ಪಡೆದು ಮುಸ್ಲಿಮರಲ್ಲಿ ಲಸಿಕೆ ಕುರಿತು ಜಾಗ್ರತಿ ಮೂಡಿಸಿದ ಸಲಗಾರ

ಬಸವಕಲ್ಯಾಣ:ಮೇ.30: ಬಿಜೆಪಿ ಶಾಸಕ ಶರಣು ಸಲಗರ ಅವರು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಜತೆಯಲ್ಲಿ ವಿಡಿಯೊ ಕಾಲ್ ಮಾಡಿ ಮುಸ್ಲಿಮರಲ್ಲಿ ಕೋವಿಡ್‌ ಲಸಿಕೆ ಬಗ್ಗೆ ಅರಿವು ಮೂಡಿಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ ಶನಿವಾರ ಲಸಿಕೆ ಬಗ್ಗೆ ಶಾಸಕರು ಜಾಗೃತಿ ಮೂಡಿಸುತ್ತಿದ್ದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಶಾಸಕರು ಇಬ್ರಾಹಿಂ ಅವರಿಗೆ ವಿಡಿಯೊ ಕಾಲ್‌ ಮಾಡಿದರು.

‘ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಕೋವಿಡ್ ಸೋಂಕು ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರನ್ನೂ ಕಾಡುತ್ತಿದೆ. ಅದರ ನಿರ್ಮೂಲನೆಗೆ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವುದು ಅಗತ್ಯ’ ಎಂದು ಇಬ್ರಾಹಿಂ ಅವರು ಸಲಹೆ ನೀಡಿದರು.

ಹೀಗಾಗಿ ಸಮುದಾಯದ ಅನೇಕರು ಲಸಿಕೆ ಪಡೆದುಕೊಂಡರು. ನಗರಸಭೆ ಆಯುಕ್ತ ಗೌತಮ ಕಾಂಬಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣ ಗೋಣೆ ಇದ್ದರು.