ಸಿಎಂ ಆದೇಶದಂತೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

ಬಳ್ಳಾರಿ ಮೇ 13 : ಪತ್ರಕರ್ತರು ಹಾಗೂ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಸರಕಾರ ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಪರಿಗಣಿಸಿ ಅವರಿಗೆ ಕೋವಿಡ್ ಲಸಿಕೆ ನೀಡಲು ಮುಖ್ಯ ಮಂತ್ರಿಗಳ ಆದೇಶದಂತೆ ಇಂದು ಜಿಲ್ಲೆಯಲ್ಲಿ ಮಾಧ್ಯಮ‌ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆಯನ್ನು ಹಾಕಲಾಯಿತು.
 ವಾರ್ತಾ ಇಲಾಕೆಯ ಸಹಕಾರದಿಂದ ಆರೋಗ್ಯ ಇಲಸಖೆ ನಗರದ  ಪತ್ರಿಕಾ‌ ಭವನದಲ್ಲಿ ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಮಾಧ್ಯಮ ಸಂಸ್ಥೆಗಳ‌ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಿದರು….ಜನ ಮಾಧ್ಯಮ‌ ಪ್ರತಿನಿಧಿಗಳು ಲಸಿಕೆ ಪಡೆದಿದ್ದಾರೆ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ರಾಮಲಿಂಗಪ್ಪ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಅನಿಲ್ ಕುಮಾರ್, ಈಶ್ವರ್  ದಾಸಪ್ಪನವರ್ ಮೊದಲಾದವರು ಇದ್ದರು.
ಇದೇ ರೀತಿ  ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳು ಸಹ ವರದಿಗಾಗಿ ಹೊರಗಡೆ ತಿರುಗಾಡುತ್ತಾರೆ. ಅವರು ಸಹ ಕರೋನಾ ಸೋಂಕನ್ನು ಎದುರಿಸಿ ಬದುಕಬೇಕಾಗಿದೆ ಅದಕ್ಕಾಗಿ ಆಧ್ಯತೆ ಮೇಲೆ ಲಸಿಕೆ ನೀಡಲು ಕೋರಿದ್ದಕ್ಕೆ ಮುಖ್ಯ ಮಂತ್ರಿಗಳ ಆದೇಶದಂತೆ ಮಾಧ್ಯಮ ಪ್ರತಿನಿಧಿಗಳಿಗೆ, ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊದಲ ಡೋಜ್ ಲಸಿಕೆ ಇಂದು ದೊರೆತಿದೆ.