
ಬೀದರ:ಮೇ.19: ನವದೆಹಲಿಯಲ್ಲಿ ಸಿದ್ಧರಾಮಯ್ಯನವರೇ ಮುಂದಿನ ಕರುನಾಡ ಸಿಎಂ ಎಂದು ಘೋಷಣೆಯಾಗುತ್ತಲೇ ಇತ್ತ ಬೀದರ ನಗರದ ಕಾಂಗ್ರೇಸ್ ಪಾಳಯದಲ್ಲಿ ಹಾಗೂ ಕುರುಬ ಗೊಂಡ ಸಮಾಜದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ಸಿದ್ಧರಾಮಯ್ಯನವರು ಕರ್ನಾಟಕದ 24ನೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ ನಂತರ ಕರ್ನಾಟಕ ರಾಜ್ಯ ಆದಿವಾಸಿ ಗೊಂಡ ಸಮಾಜದ ಹಾಗೂ ವಿವಿಧ ಕುರುಬ ಗೊಂಡ ಸಮಾಜದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ, ಆಕಾಶದಲ್ಲಿ ಪಟಾಕಿಗಳ ಚಿತ್ತಾರಗಳನ್ನು ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆಯವರು “ಇತ್ತಿಚಿಗೆ ಸಿದ್ಧರಾಮಯ್ಯನವರು ಸಿಎಂ ಆಗಲೆಂದು 1100 ತೆಂಗಿನ ಕಾಯಿಗಳನ್ನು ಬೀರದೇವರಿಗೆ ಒಡೆದಿದ್ದೇವು. ನಮ್ಮ ಹರಕೆ ದೇವರು ತೀರಿಸಿದ್ದಾನೆ ಎಂದು ತಿಳಿಸಿದರು.
ಬಡವರ ಬಗ್ಗೆ ಕಾಳಜಿ, ದಲಿತರು, ಹಿಂದುಳಿದವರನ್ನು, ತುಳಿತಕ್ಕೊಳಗಾದವರನ್ನು ಒಗ್ಗೂಡಿಸುವ ಶಕ್ತಿ, ಎಲ್ಲರನ್ನೂ ತೆಗೆದುಕೊಂಡು ಹೋಗುತ್ತ ರಾಜ್ಯವನ್ನು ಸುಭಿಕ್ಷವಾಗಿ ಮುನ್ನಡೆಸಿಕೊಂಡು ಹೋಗುವ ಶಕ್ತಿ ಸಿದ್ಧರಾಮಯ್ಯನವರ ಹತ್ತಿರವಿದೆ. ಹೀಗಾಗಿ ಅವರನ್ನು ಸಿಎಂ ಮಾಡಿರುವ ಎಐಸಿಸಿಯ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ, ಸುರ್ಜೆವಾಲಾ ಸೇರಿದಂತೆ ಕಾಂಗ್ರೇಸ್ ಪಕ್ಷದ ಎಲ್ಲಾ ಮುಖಂಡರಿಗೆ ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಇದೀಗ ತಾವು ಚಿತ್ರದಲ್ಲಿ ನೋಡ್ತಾ ಇದ್ದೀರಿ. ಸಾಕಷ್ಟು ಪಟಾಕಿಗಳ ಸದ್ದು ಕೇಳಿ ಬರುತ್ತಿದೆ. ಯುವಕರಲ್ಲಿ ಸಂಭ್ರಮ ಮನೆ ಮಾಡಿದೆ. ಖುಷಿಯಿಂದ ಒಬ್ಬರಿಗೊಬ್ಬರು ಸ್ವೀಟ್ ತಿಂದು ಖುಷಿ ಹಂಚಿಕೊಳ್ಳುತ್ತಿದ್ದಾರೆ. ಮತ್ತೆ ನಮ್ಮ ಬಡವರ ಭಾಗ್ಯವಿಧಾತಾ, ಅನ್ನಭಾಗ್ಯದ ಸರದಾರ, ಬಡವರ ತುತ್ತಿನ ಚೀಲ ತುಂಬುವ ಬಡವರ ಬಂಧು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ಧಾರೆ. ಅದರಲ್ಲೂ 75 ವರ್ಷದ ಅಜ್ಜನೊಬ್ಬ ಕೈಯಲ್ಲಿ ದಂಡು ಹಿಡಿದುಕೊಂಡು ಉರಿ ಬಿಸಿಲಿನಲ್ಲಿಯೂ ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ಕಂಡುಬಂತು. ವಾಹನಗಳ ಮೇಲೆ ಈಗಾಗಲೇ ಅಡ್ವಾನ್ಸ್ ಆಗಿ 2ನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ಧರಾಮಯ್ಯನವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಬ್ಯಾನರ್ ಅಳವಡಿಸಿರುವ ದೃಶ್ಯಗಳನ್ನು ಇದೀಗ ತಾವು ನೋಡುತ್ತಿದ್ದೀರಿ. ಅಷ್ಟೊಂದು ಭರವಸೆಯನ್ನು ರಾಜ್ಯದ ಜನತೆ ಇಟ್ಟುಕೊಂಡು ಸಂಭ್ರಮ ಪಡುತ್ತಿದ್ದಾರೆ ಅಂತಾನೆ ಇಲ್ಲಿ ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಮುಖರಾದ ರಾಜಕುಮಾರ ಹಲಬುರ್ಗೆ, ಮಚೇಂದ್ರ ಕಂದಗೊಂಡ, ಎಂ.ಎಸ್.ಕಟಗಿ, ಮಾರುತಿರಾವ ಶಾಖಾ, ವಿಜಯಕುಮಾರ ಡುಮ್ಮೆ, ಕುಶಾಲ ಯರನಳ್ಳಿ, ನರಸಪ್ಪ, ಸಂಜೀವಕುಮಾರ ಡೊಳ್ಳಿ, ರಘುನಾಥ ಭೂರೆ, ಸೇರಿದಂತೆ ಅನೇಕರು ಹಾಜರಿದ್ದರು.