ಸಿಎಂಗೆ ಒಡೆಯರ್ ಪ್ರಶಸ್ತಿ

ಬೆಂಗಳೂರು,ಏ.೮-ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಿ ಗೌರವಿಸಲಾಯಿತು. ೨೦೨೩ರ ಆಡಳಿತ ಅವಧಿಯಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ಕೆಲಸ ಮಾಡಿ ಸಾಹಿತಿಗಳ ಶಿಫಾರಸ್ಸು ಮತ್ತು ಆಯ್ಕೆ ಸಮಿತಿಯಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಅಹಿಂದ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರಾದ ಮುತ್ತುರಾಜ್ ಸಂಘಟನೆಯ ಪದಾಧಿಕಾರಗಳಾದ ಶ್ರೀನಿವಾಸ್ ಮೂರ್ತಿ ಶಶಿಕುಮಾರ್ ದೇವರಾಜ್ ಇನ್ನಿತರು ಹಾಜರಿದ್ದರು