ಸಿಇಟಿ ಫಲಿತಾಂಶ -ಸಹ್ಯಾದ್ರಿ ವಿದ್ಯಾರ್ಥಿಗಳ ಸಾಧನೆ

ಕೋಲಾರ,ಜೂ.೧೭- ಕೋಲಾರದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ದರ್ಶನ್ ಎಸ್. ಎಂಬ ವಿದ್ಯಾರ್ಥಿಯು ೫೨೨ ನೇ ರ್‍ಯಾಂಕ್, ಅಕ್ಷಯ ಎಂ. ೫೬೪ ನೇ ರ್‍ಯಾಂಕ್, ಗ್ಲೋರಿಯಾ ಇ. ಬಿ. ೫೯೯ ನೇ ರ್‍ಯಾಂಕ್, ವೆಂಕಟರಾಮ್ ಎಂ. ೯೪೩ನೇ ರ್‍ಯಾಂಕ್, ಚಂದನ ಪಿ.ವಿ ೨೦೮೫ ನೇ ರ್‍ಯಾಂಕ್, ಯಶಸ್ವಿನಿ ಎಸ್. ೨೩೩೮ ನೇ ರ್‍ಯಾಂಕ್ ಪಡೆದಿದ್ದಾರೆ.
೧೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ ಗಳಲ್ಲಿ ಅತ್ಯುನ್ನತ ರ್‍ಯಾಂಕ್‌ಗಳನ್ನು ಗಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ.