ಸಿಇಟಿ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ

ಬೆಂಗಳೂರು, ಜೂ.೧೫- ಉನ್ನತ ಶಿಕ್ಷಣದ ಭವಿಷ್ಯದ ಬಾಗಿಲೆಂದೇ ಬಿಂಬಿಸಲಾಗಿರುವ ಇಂಜಿನಿಯರಿಂಗ್, ನರ್ಸಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಹೊರಬಿದ್ದಿದ್ದು, ಎಲ್ಲಾ ವಿಭಾಗಗಳಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರಿನ ವಿಜ್ಞೇಶ್ ನಟರಾಜ್ ಕುಮಾರ್ ಶೇ. ೯೭.೮೮೯% ರಷ್ಟು ಅಂಕಗಳಿಸಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಅದೇ ರೀತಿ, ಟಾಪ್ ೧೦ ರ್‍ಯಾಂಕ್ ಪಟ್ಟಿಯಲ್ಲಿ ಮತ್ತೋರ್ವ ಬೆಂಗಳೂರಿನ ಅರುಣ್ ಕೃಷ್ಣಸ್ವಾಮಿ ಶೇ.೯೭.೫ ರಷ್ಟು ಅಂಕಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಮಲ್ಲೇಶ್ವರಂನ ಪರೀಕ್ಷಾ ಪ್ರಾಧಿಕಾರ ಕೇಂದ್ರ ಕಚೇರಿಯಲ್ಲಿ ಇಂದು ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಈ ಪರೀಕ್ಷೆಯನ್ನು ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‌ಸಿ ನರ್ಸಿಂಗ್ ಸೇರಿದಂತೆ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ, ಕಳೆದ ಮೇ ೨೦ ರಿಂದ ಮೇ ೨೨ರ ವರೆಗೆ ನಡೆಸಿದ್ದು, ಈ ಪರೀಕ್ಷೆಗೆ ೨೪೪೩೪೫ ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಎಷ್ಟು ವಿದ್ಯಾರ್ಥಿಗಳು ಅರ್ಹ: ಈ ಪೈಕಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿದ ನಂತರ, ಇಂಜಿನಿಯರಿಂಗ್ ಕೋರ್ಸಿಗೆ ೨೦,೩೩೮೧ ರ್‍ಯಾಂಕ್ ನೀಡಲಾಗಿದೆ. ಮುಂದುವರಿದು ಕೃಷಿ ವಿಜ್ಞಾನ ಕೋರ್ಸುಗಳಿಗೆ ೧೬,೪೧೮೭ ಅಭ್ಯರ್ಥಿಗಳು, ೧೬,೬೭೫೬ ಪಶುಸಂಗೋಪನೆ, ೧೬,೬೭೪೬ ಯೋಗ ಮತ್ತು ನ್ಯಾಚುರೋಪತಿ ಮತ್ತು ೨೦,೬೧೯೧ ಅಭ್ಯರ್ಥಿಗಳು ಬಿ, ಫಾರ್ಮ ಕೋರ್ಸಿಗೆ ಮತ್ತು ೨೦,೬೩೪೦ ಫಾರ್ಮ-೨ ಕೋರ್ಸಿಗೆ ಅರ್ಹತೆಯನ್ನು ಪಡೆದಿದ್ದಾರೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನಲ್ಲಿ ಐಎನ್ ಸಿ, ಅನುಸಾರ ಹಾಗು ಸರ್ಕಾರದ ಆದೇಶದ ಅನ್ವಯ ಬಿ.ಎಸ್.ಸಿ (ನರ್ಸಿಂಗ್) ಕೋರ್ಸಿಗೂ ಸಹ ಸಿಇಟಿ ನಡೆಸಲಾಗಿದ್ದು, ಒಟ್ಟು ೧೬,೬೮೦೮ ಅಭ್ಯರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ ಎಂದು ಸಚಿವರು ವಿವರಿಸಿದರು.ಬಾಲಕಿಯರೇ ಮೇಲುಗೈ: ಬಿಎಸ್ಸಿ ಕೃಷಿ ವಿಜ್ಞಾನ ವಿಭಾಗದಲ್ಲಿ ೭೧, ೭೯೬ ಬಾಲಕರು ಅರ್ಹತೆ ಪಡೆದರೆ, ೯೪ ಸಾವಿರಕ್ಕೂ ಅಧಿಕ ಬಾಲಕಿಯರು ಅರ್ಹತೆ ಪಡೆದುಕೊಂಡಿದ್ದಾರೆ. ಬಿಫಾರ್ಮಾದಲ್ಲೂ ೯೭ ಸಾವಿರ ಬಾಲಕರಿದ್ದರೆ, ಒಂದು ಲಕ್ಷಕ್ತ ಅಧಿಕ ವಿದ್ಯಾರ್ಥಿನಿಯರು ಅರ್ಹರಾಗಿದ್ದಾರೆ. ಡಿ ಫಾರ್ಮಾದಲ್ಲೂ ಒಂದು ಲಕ್ಷ ಬಾಲಕಿಯರು, ಬಿಎಸ್ಸಿ ನರ್ಸಿಂಗ್ ನಲ್ಲೂ ೯೪ ಸಾವಿರಕ್ಕೂ ಅಧಿಕ ಬಾಲಕಿಯರು ಅರ್ಹರಾಗಿದ್ದಾರೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಪ್ರಾಧಿಕಾರದ ಕಾರ್ಯನಿರ್ವಾಹಕಿ ಎಸ್.ರಮ್ಯಾ ಸೇರಿದಂತೆ ಪ್ರಮುಖರಿದ್ದರು.

ಫಲಿತಾಂಶ ಚೆಕ್ ಮಾಡುವ ವಿಧಾನ ಇಲ್ಲಿದೆ

  • ಕೆಇಎ ಅಧಿಕೃತ ವೆಬ್‌ಸೈಟ್hಣಣಠಿs://ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ಞeಚಿ/ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಯುಜಿಸಿಇಟಿ -೨೦೨೩ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.ಆಗ ನಿಮಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇನ್ನೊಂದು ಪುಟ ಓಪನ್ ಆಗುತ್ತದೆ.
  • ನಂತರ ಓಪನ್ ಆದ ಪುಟದಲ್ಲಿ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಮತ್ತು ಪಾಸ್‌ವರ್ಡ್, ನಮೂದಿಸಿ ಲಾಗಿನ್ ಆಗಿ.
    ಅಗತ್ಯವಿರುವ ವಿವರಗಳನ್ನು ನಮೂದಿಸಿ ಸೈನ್ ಇನ್ ಮೇಲೆ ಕ್ಲಿಕ್ ಮಾಡಿ.
    ನಂತರ ಪರದೆಯ ಮೇಲೆ ನಿಮ್ಮ ಯುಜಿಸಿಇಟಿ-೨೦೨೩ ಫಲಿತಾಂಶ ಕಾಣಸಿಗುತ್ತದೆ.

ಇಂಜಿನಿಯರಿಂಗ್ ಟಾಪರ್ಸ್..!
ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ತೃತೀಯ ಸ್ಥಾನವನ್ನು ಮೃದ್ಧ್‌ಶೆಟ್ಟಿ ಹಾಗೂ ಎಸ್.ಸುಮೇಧ್‌ಗೆ ೪ನೇ ಸ್ಥಾನ ಪಡೆದುಕೊಂಡಿದ್ದರೆ, ಮಾಧವ ಸೂರ್ಯಗೆ ೫ನೇ ಸ್ಥಾನ ಲಭಿಸಿದೆ.

ಯುಜಿ ನೀಟ್ ಫಲಿತಾಂಶ ಬಂದ ನಂತರ ಈ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ ಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು. ಹಾಗೇ, ಓಂಖಿಂ-೨೦೨೩ ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕೆ ರ?ಯಾಂಕ್ ಅನ್ನು ಪ್ರಕಟಿಸಲಾಗುವುದು ಎಂದು ಸಚಿವರು ನುಡಿದರು.

ಶೀಘ್ರ ಕೌನ್ಸಿಲಿಂಗ್..!
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ೨೦೨೩ರ ಮೊದಲ ಸುತ್ತಿನ ಕೌನ್ಸಿಲಿಂಗ್ ದಿನಾಂಕಗಳನ್ನು ಶೀಘ್ರವಾಗಿ ಪ್ರಕಟಿಸಲಾಗುವುದು. ಇನ್ನೂ, ರ್‍ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆ ನಂತರ ಅರ್ಹತೆ ಪರಿಗಣಿಸಲಾಗುವುದು ಎಂದು ಸುಧಾಕರ್ ಮಾಹಿತಿ ನೀಡಿದರು.

ವಿಭಾಗವಾರು ಮೊದಲ ರ್‍ಯಾಂಕ್…!

  • ಭೈರೇಶ್ ಎಸ್.ಎಚ್.- ಬಿಎಸ್ಸಿ ಕೃಷಿ
  • ಮಾಳವಿಕಾ ಕಫೂರ್- ಬಿ.ವಿ.ಎಸ್ಸಿ ಪಶುಸಂಗೋಪನೆ ಹಾಗೂ ಬಿಎಸ್ಸಿ ನರ್ಸಿಂಗ್
  • ಪ್ರತೀಕ್ಷಾ ಆರ್.- ಬಿ.ಫಾರ್ಮಾ ಹಾಗೂ ಡಿ.ಫಾರ್ಮಾ