ಸಿಇಟಿ ಫಲಿತಾಂಶದಲ್ಲಿ ತಾರತಮ್ಯ:ಆರೋಪ

ಕಲಬುರಗಿ ಆ 1: ಪ್ರಸ್ತುತ ವರ್ಷದ ಸಿಇಟಿ ಫಲಿತಾಂಶವು ತಾರತಮ್ಯದಿಂದ ಕೂಡಿದೆ ಎಂದು ಎಐಡಿಎಸ್‍ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆರೋಪಿಸಿದ್ದಾರೆ. ಸಿಇಟಿ ಪುನರಾವರ್ತಿತ ಫಲಿತಾಂಶದಲ್ಲಿ ಅವರ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಎನ್ನುವುದನ್ನು ಅವರಿಗೆ ಮೊದಲೇ ತಿಳಿಸಿರಲಿಲ್ಲ.ಕೊರೋನ ಸಾಂಕ್ರಾಮಿಕದ ಕಾರಣದಿಂದಾಗಿ, ಕಳೆದ ವರ್ಷದ ದ್ವಿತೀಯ ಪಿಯುಸಿಪರೀಕ್ಷೆ ನಡೆಸದೆಯೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಅಳವಡಿಸುವ ಮೂಲಕ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಹೀಗೆ ಮಾಡುವಾಗ, ಮೌಲ್ಯಮಾಪನ ಪ್ರಕ್ರಿಯೆ ವೈಜ್ಞಾನಿಕ ವಿಧಾನಕ್ರಮದಲ್ಲಿ ನಡೆಸಲಾಗುವುದು ಎಂದು ಸರ್ಕಾರ ಆಶ್ವಾಸನೆ ಕೊಟ್ಟಿತ್ತು. ಹಾಗೆ ನೀಡಿರುವಫಲಿತಾಂಶ, ವೈಜ್ಞಾನಿಕ ವಿಧಾನದಲ್ಲಿ ನಡೆದದ್ದೇ ನಿಜ ಎಂದಾದರೆ, ಪುನರಾವರ್ತಿತ ಸಿಇಟಿ ವಿದ್ಯಾರ್ಥಿಗಳ ರ್ಯಾಂಕ್ ಗೆ ಆ ಫಲಿತಾಂಶವನ್ನು ಏಕೆ ಪರಿಗಣಿಸುವುದಿಲ್ಲ? ಹಿಂದಿನ ವರ್ಷದದ್ವಿತೀಯ ಪಿಯುಸಿ ಫಲಿತಾಂಶವನ್ನು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರಿಗಣಿಸುವುದಿಲ್ಲಎನ್ನುವ ನಿರ್ಧಾರವು, ಮೌಲ್ಯಮಾಪನ ಪ್ರಕ್ರಿಯೆಯು ವೈಜ್ಞಾನಿಕವಾಗಿತ್ತೆ ಎನ್ನುವ ಬಗ್ಗೆ ಪ್ರಶ್ನೆ ಮೂಡಿಸುತ್ತದೆ. ಅದು ವೈಜ್ಞಾನಿಕವಾಗಿರದೆ, ಯಾವುದೋ ಒಂದು ತಾಂತ್ರಿಕವಿಧಾನದಿಂದ ಫಲಿತಾಂಶ ಪ್ರಕಟಿಸಿದ್ದೆ ಆದರೆ, ಸರ್ಕಾರದ ತಪ್ಪಿಗೆ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವಂತೆ ಆಗಬಾರದು. ದ್ವಿತೀಯ ಪಿಯುಸಿ ಫಲಿತಾಂಶಸೇರ್ಪಡೆಗೊಂಡು ಸಿಇಟಿ ರ್ಯಾಂಕ್‍ಪಡೆದುಕೊಂಡು ಬಂದ ಹೊಸ ಬ್ಯಾಚ್ ನವಿದ್ಯಾರ್ಥಿಗಳೊಂದಿಗೆ, ಪಿಯುಸಿ ಫಲಿತಾಂಶ ಸೇರ್ಪಡೆಗೊಳ್ಳದೆಯೆ ಇರುವ ಪುನರಾವರ್ತಿತವಿದ್ಯಾರ್ಥಿಗಳನ್ನು ಸೇರಿಸುವುದು ಅನ್ಯಾಯವಾಗುತ್ತದೆ.ಕೇವಲ ಸಿಇಟಿ ಅಂಕಗಳನ್ನು ಮಾನದಂಡವಾಗಿ ತೆಗೆದುಕೊಳ್ಳುವುದುವೈಜ್ಞಾನಿಕವಲ್ಲ.ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಏಕರೂಪತೆ ಇರಬೇಕು.ಪುನರಾವರ್ತಿತ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಫಲಿತಾಂಶವು ವೈಜ್ಞಾನಿಕ ಮೌಲ್ಯಮಾಪನಪ್ರಕ್ರಿಯೆಯ ಅಡಿಯಲ್ಲಿ ನಡೆದಿದ್ದು ನಿಜವಾಗಿದ್ದರೆ ಆ ಫಲಿತಾಂಶವನ್ನು ಸರ್ಕಾರವು ಸಿಇಟಿರ್ಯಾಂಕ್ ನೀಡುವಾಗ ಪರಿಗಣಿಸಬೇಕು. ಅಥವಾ ಎರಡೂ ಬ್ಯಾಚ್‍ಗಳಿಗೆ ಒಂದೇ ತೆರನಾದಮೌಲ್ಯಮಾಪನ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕಪುನರಾವರ್ತಿತ ವಿದ್ಯಾರ್ಥಿಗಳಿಗಾಗಲಿ ಮತ್ತು ಹೊಸ ವಿದ್ಯಾರ್ಥಿಗಳಿಗಾಗಲಿ ತಾರತಮ್ಯವಿಲ್ಲದ,ವೈಜ್ಞಾನಿಕ ಫಲಿತಾಂಶ ದೊರಕಬೇಕು ಮತ್ತು ಎಲ್ಲರಿಗು ನ್ಯಾಯ ದೊರಕಬೇಕು ಎಂದವರು ಆಗ್ರಹಿಸಿದ್ದಾರೆ.