
ಬೆಂಗಳೂರು,ಜು.೩೦- ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಮಾನದಂಡವಾಗಿರುವ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಈ ಬಾರಿಯು ಸಿಇಟಿಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು.
೨೦೨೨ರ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಟ್ಟು ೨,೧೦,೮೨೯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ಇಂಜಿನಿಯರಿಂಗ್ ಕೋರ್ಸ್ಗೆ ೧,೭೧,೬೫೬ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದರು.
ಕೃಷಿ ಕೋರ್ಸ್ಗೆ ೧,೩೯,೯೬೮ ಅಭ್ಯರ್ಥಿಗಳು ಪಶುವೈದ್ಯಕೀಯ ಕೋರ್ಸ್ಗೆ ೧,೪೨,೮೨೦, ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ಗೆ ೧,೪೨,೭೫೦ ಅಭ್ಯರ್ಥಿಗಳು ಬಿ ಫಾರ್ಮಾ ಮತ್ತು ಫಾರ್ಮಾ ಡಿ ಕೋರ್ಸ್ಗೆ ೧,೭೪೫೬೮ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಸಚಿವರು ಹೇಳಿದರು.
ಈ ವರ್ಷದ ಸಿಇಟಿ ಪರೀಕ್ಷೆಯ ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸ್ಗಳ ಫಲಿತಾಂಶದಲ್ಲಿ ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ಗೆ ೮೩,೦೮೧ ಹುಡುಗರು ಅರ್ಹತೆ ಪಡೆದಿದ್ದರೆ, ಅರ್ಹತೆ ಪಡೆದ ಹುಡುಗಿಯರ ಸಂಖ್ಯೆ ೮೮,೫೭೫, ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ಗೆ ೬೨೭೪೨ ಹುಡುಗರು ಅರ್ಹತೆ ಪಡೆದಿದ್ದರೆ, ೮೦೦೮ ಹುಡುಗಿಯರು ಅರ್ಹತೆ ಪಡೆದಿದ್ದಾರೆ. ಬಿಎಸ್ಸಿ ಕೃಷಿ ಕೋರ್ಸ್ಗೆ ೬೧೮೯೮ ಹುಡುಗರು ಅರ್ಹತೆ ಪಡೆದಿದ್ದರೆ, ೭೮೦೭೦ ಹುಡುಗಿಯರು ಅರ್ಹತೆ ಪಡೆದಿದ್ದಾರೆ. ಹಾಗೆಯೇ, ಪಶು ವೈದ್ಯಕೀಯ ಕೋರ್ಸ್ಗೆ ೬೨,೭೭೬ ಹುಡುಗರು, ೮೦೦೪೪ ಹುಡುಗಿಯರು ಅರ್ಹತೆ ಪಡೆದಿದ್ದಾರೆ ಎಂದು ಅವರು ವಿವರ ನೀಡಿದರು.
ಎಲ್ಲ ಕೋರ್ಸ್ಗಳ ೧ ರಿಂದ ೯ರ ವರೆಗಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಸಚಿವರು, ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಅಪೂರ್ವ ತಂಡನ್ ಇಂಜಿನಿಯರಿಂಗ್ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರು.
ಈ ಸಾಲಿನ ಸಿಇಟಿ ಪರೀಕ್ಷೆ ಕಳೆದ ಜೂ. ೧೬ ಮತ್ತು ೧೭ ರಂದು ನಡೆದಿತ್ತು. ಇಂದು ವಿವಿಧ ಕೋರ್ಸ್ಗಳಿಗೆ ರ್ಯಾಂಕ್ ಘೋಷಿಸಲಾಗಿದೆ. ರ್ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರೀಕ್ಷೆಯ ನಂತರ ಅರ್ಹತೆಯನ್ನು ಪರಿಗಣಿಸಲಾಗುವುದು ಎಂದರು.
ಯುಜಿ ನೀಟ್-೨೦೨೨ರ ಫಲಿತಾಂಶ ಬಂದ ನಂತರ ಯುಜಿ ನೀಟ್-೨೦೨೨ರ ಅಂಕಗಳ ಆಧಾರದ ಮೇಲೆ ವೈದ್ಯಕೀಯ, ದಂತ ವ್ಯದ್ಯಕೀಯ, ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು, ಹಾಗೆಯೇ ನಾಟಾ-೨೦೨೨ರ ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್ಗಳ ರ್ಯಾಂಕುಗಳನ್ನು ನಂತರ ಪ್ರಕಟಿಸಲಾಗುವುದು ಎಂದರು.
ರ್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು, ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಓ ಕಚೇರಿಗೆ ಇ-ಮೇಲ್ ಮೂಲಕ ಸಲ್ಲಿಸಿ ರ್ಯಾಂಕ್ ಪಡೆಯಬಹುದು, ಹಾಗೆಯೇ ಯಾವುದೇ ಅರ್ಹ ಅಭ್ಯರ್ಥಿಗೆ ರ್ಯಾಂಕ್ ನೀಡದೆ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ೨ನೇ ವರ್ಷದ ಪಿಯುಸಿ ಫೋಟೊ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್ಗೆ ಕಳುಹಿಸಿ ರ್ಯಾಂಕ್ ಪಡೆಯಬಹುದು ಎಂದರು.

ಇಂಜಿನಿಯರಿಂಗ್ನಲ್ಲಿ ಪ್ರಥಮ ೯ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ
ಮೊದಲ ರ್ಯಾಂಕ್ -ಅಪೂರ್ವ ತಂಡನ್, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ
೨ನೇ ರ್ಯಾಂಕ್ – ಸಿದ್ದಾರ್ಥಸಿಂಗ್, ಚೈತನ್ಯ ಟೆಕ್ನೊ ಸ್ಕೂಲ್ ಮಾರತ್ಹಳ್ಳಿ
೩ನೇ ರ್ಯಾಂಕ್ -ಆತ್ಮಕುರಿ ವೆಂಕಟಮಾದ್, ಚೈತನ್ಯ ಟೆಕ್ನೊ ಸ್ಕೂಲ್ ಮಾರತ್ಹಳ್ಳಿ
೪ನೇ ರ್ಯಾಂಕ್-ಶಿಶೀರ್. ಆರ್.ಕೆ, ನಾರಾಯಣ, ಟೆಕ್ನೊ ಸ್ಕೂಲ್ ವಿದ್ಯಾರಣ್ಯಪುರ
೫ನೇ ರ್ಯಾಂಕ್- ವಿಶಾಲ್ ಬೈಸಾನಿ, ಮಹೇಶ್ ಪಿಯು ಕಾಲೇಜು, ಚಾಮರಾಜಪೇಟೆ.
೬ನೇ ರ್ಯಾಂಕ್-ಸಾಗರ್.ಕೆ.ವಿ, ಮಹೇಶ್ ಪಿಯು ಕಾಲೇಜು, ಚಾಮರಾಜಪೇಟೆ.
೭ನೇ ರ್ಯಾಂಕ್-ಮಹೇಶ್ಕುಮಾರ್.ವಿ, ನಾರಾಯಣ ಟೆಕ್ನೊ ಸ್ಕೂಲ್ ವಿದ್ಯಾರಣ್ಯಪುರ
೮ನೇ ರ್ಯಾಂಕ್ ಸಿದ್ದಾರ್ಥ್- ಕುಮರನ್ ಚಿಲ್ಡ್ರನ್ಸ್ ಹೋಂ ಬೆಂಗಳೂರು
೯ನೇ ರ್ಯಾಂಕ್- ಸಾತ್ವಿಕ್. ವಿ, ಚೈತನ್ಯ, ಟೆಕ್ನೊ ಸ್ಕೂಲ್ ರಾಮಮೂರ್ತಿ ನಗರ
ಬಿಎನ್ವೈಎಸ್ ನಲ್ಲಿ ಪ್ರಥಮ ೯ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ
೧ನೇ ರ್ಯಾಂಕ್ -ಹೃಷಿಕೇಶ್ ನಾಗ್ಭೂಷಣ್ ಗಂಗೂಲಿ, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸಿ, ಬೆಂಗಳೂರು
೨ನೇ ರ್ಯಾಂಕ್ – ವ್ರಜೇಶ್ ವೇಂದರ್ಶೆಟ್ಟಿ, ಮಾದವ ಕೃಪಾ ಇಂಗ್ಲಿಷ್ ಸ್ಕೂಲ್, ಮಣಿಪಾಲ್, ಉಡುಪಿ.
೩ನೇ ರ್ಯಾಂಕ್ -ಕೃಷ್ಣಾ. ಎಸ್.ಆರ್, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್,ಬೆಂಗಳೂರು
೫ನೇ ರ್ಯಾಂಕ್- ವ್ರೈಶಾನ್ ವೇಂದರ್ ಶೆಟ್ಟಿ, ಮಾದವ ಕೃಪಾ ಇಂಗ್ಲಿಷ್ ಸ್ಕೂಲ್, ಮಣಿಪಾಲ್, ಉಡುಪಿ.
೬ನೇ ರ್ಯಾಂಕ್- ವಿಶಾಲ್. ಬಿ, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು
೭ನೇ ರ್ಯಾಂಕ್- ಆದಿತ್ಯಾ ಕಾಮತ್ ಅಮೆಮ್ರಾಯ್, ಎಕ್ಸ್ಪಟ್ ಪಿಯು ಕಾಲೇಜು, ಮಂಗಳೂರು.
೮ನೇ ರ್ಯಾಂಕ್ ಮನೋಜ್. ಎನ್- ಆಳ್ವಾಸ್ ಪಿಯು ಕಾಲೇಜು, ಮುದಬೈಡ್ರೆ, ಮಂಗಳೂರು.
೯ನೇ ರ್ಯಾಂಕ್- ಅನನ್ಯ ಐಶ್ವರ್ಯ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಮಾರತ್ಹಳ್ಳಿ, ಬೆಂಗಳೂರು
ಕೃಷಿಕ್ಷೇತ್ರದಲ್ಲಿ ಪ್ರಥಮ ೯ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ
೧ನೇ ರ್ಯಾಂಕ್ – ಅರ್ಜುನ್ ರವಿಶಂಕರ್, ಹೆಚ್ಎಎಲ್ ಪಬ್ಲಿಕ್ ಸ್ಕೂಲ್,ಬೆಂಗಳೂರು
೨ನೇ ರ್ಯಾಂಕ್ – ಸುಮೀತ್ ಎಸ್. ಪಾಟೀಲ್, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್,ಬೆಂಗಳೂರು
೩ನೇ ರ್ಯಾಂಕ್ -ಸುದೀಪ್. ವೈ.ಎಂ, ವಿದ್ಯಾನಿಕೇತನ್ ಪಿಯು ಕಾಲೇಜು, ತುಮಕೂರು.
೪ನೇ ರ್ಯಾಂಕ್-ಹಿತಾಯಶ್ ಲಕ್ಷ್ಮಿಕಾಂತ್ ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು.
೫ನೇ ರ್ಯಾಂಕ್- ಮನೋಜ್. ಎನ್, ಆಳ್ವಾಸ್ ಪಿಯು ಕಾಲೇಜು, ಮುದಬೈಡ್ರೆ, ಮಂಗಳೂರು.
೬ನೇ ರ್ಯಾಂಕ್- ಎ. ಕಿಶೋರ್, ಮಿರಂಡಾ ಕಾಂಪೊಸೈಟ್ ಪಿಯು ಕಾಲೇಜು, ಬೆಂಗಳೂರು
೭ನೇ ರ್ಯಾಂಕ್- ಮುರುಕಿ ಶ್ರಿ ಬರುನಿ, ವಿಶ್ವಚೈತನ್ಯ ವಿದ್ಯಾನಿಕೇತನ ಆರ್ಇಎಸ್ ಪಿಯು ಕಾಲೇಜು,
೮ನೇ ರ್ಯಾಂಕ್ ಕ್ಸಿಹಿತೇಜ್ ದೇಸಾಯಿ- ನ್ಯಾಷನಲ್ ಪಬ್ಲಿಕ್ ಸ್ಕೂಲ್, ಹೆಚ್ಎಸ್ಆರ್ ಲೇಔಟ್, ಬೆಂಗಳೂರು.
೯ನೇ ರ್ಯಾಂಕ್- ವೃಜೇಷ್ ವೇಂದರ್ ಮಾದವಕೃಪಾ ಇಂಗ್ಲಿಷ್ ಸ್ಕೂಲ್.
ಪಶು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಥಮ ೯ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ
೧ನೇ ರ್ಯಾಂಕ್ – ಹೃಷಿಕೇಶ್ ನಾಗಭೂಷಣ ಗಂಗೂಲಿ, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸಿ, ಬೆಂಗಳೂರು
೨ನೇ ರ್ಯಾಂಕ್ – ಮನೀಶ್.ಎಸ್.ಎ, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆಆರ್ ಪುರಂ, ಬೆಂಗಳೂರು
೩ನೇ ರ್ಯಾಂಕ್ -ಶುಭ ಕೌಶಿಕ್, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು.
೪ನೇ ರ್ಯಾಂಕ್-ಕೃಷ್ಣಾ. ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು.
೫ನೇ ರ್ಯಾಂಕ್- ವೃಶಾನ್ವೇಂದರ್ ಶೆಟ್ಟಿ, ಮಾದವಕೃಪಾ ಇಂಗ್ಲಿಷ್ ಸ್ಕೂಲ್, ಬೆಂಗಳೂರು.
೬ನೇ ರ್ಯಾಂಕ್- ವ್ರಜೇಶ್ ವೀರೇಂದರ್,ಮಾದವಕೃಪಾ ಮಣಿಪಾಲ್,ಉಡುಪಿ
೭ನೇ ರ್ಯಾಂಕ್- ಲಿಖಿತ ಪ್ರಕಾಶ್, ವಿಐಪಿಎಸ್ ರಾಜಾಜಿನಗರ ಬೆಂಗಳೂರು.
೮ನೇ ರ್ಯಾಂಕ್- ನಿತೀನ್.ಎಸ್- ನ್ಯಾಷನಲ್ ಪಬ್ಲಿಕ್ ಸ್ಕೂಲ್, ಚಿಕ್ಕಬಾಣವಾರ. ಬೆಂಗಳೂರು.
೯ನೇ ರ್ಯಾಂಕ್- ವಿಶಾಲ್.ಬಿ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು.