
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.23 :- ಕೂಡ್ಲಿಗಿ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ಆಚರಿಸಲು ಮತದಾರರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಆತ್ಮಸ್ತೈರ್ಯ ತುಂಬುವಲ್ಲಿ ಸಿಆರ್ ಪಿಎಫ್ ಮಹಿಳಾ ತಂಡವೊಂದು ತಾಲೂಕಿನ ಗುಡೇಕೋಟೆ ಠಾಣಾ ವ್ಯಾಪ್ತಿಯ ಅಪ್ಪೇನಹಳ್ಳಿತಾಂಡಾ, ಚಿರತಗುಂಡ ಹಾಗೂ ರಾಮಸಾಗರಹಟ್ಟಿ ಗ್ರಾಮಗಳಲ್ಲಿ ಕಳೆದ ಸಂಜೆ ಪಥಸಂಚಲನ ನಡೆಸಿತು.
ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಅವರ ನೇತೃತ್ವದಲ್ಲಿ ಪಥಸಂಚಲನ ಕಾರ್ಯ ನಡೆಸಲಾಯಿತು ಗುಡೇಕೋಟೆ ಪಿಎಸ್ಐಗಳಾದ ವಿರುಪಾಕ್ಷಪ್ಪ, ಅಪರಾಧ ವಿಭಾಗದ ಮಹಿಳಾ ಪಿಎಸ್ಐ ವಾಣಿ ಹಾಗೂ ಸಿಬ್ಬಂದಿ ಜೊತೆ 40 ಕ್ಕೂ ಹೆಚ್ಚು ಸಿಆರ್ ಪಿಎಫ್ ಮಹಿಳಾ ತಂಡ ಆಯಾ ಗ್ರಾಮದ ಮುಖ್ಯರಸ್ತೆಗಳಲ್ಲಿ ಪಥಸಂಚಲನ ನಡೆಸಿದರು ಹಾಗೂ ಮತದಾರರಲ್ಲಿ ಆತ್ಮಸ್ತೈರ್ಯ ತುಂಬಿದರು.