ಸಿಂ.ಕಾ.ಸುರೇಶ್ ಹೊಸತನವನ್ನು ಜನರಿಗೆ ನೀಡುವ ಪತ್ರಕರ್ತ

ಕೆ.ಆರ್.ಪೇಟೆ. ಸೆ.16- ಸಿಂ.ಕಾ.ಸುರೇಶ್ ಒಬ್ಬ ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿದ್ದ ಹೊಸತನವನ್ನು ಜನರಿಗೆ ನೀಡುವಲ್ಲಿ ಅನ್ವೇಷಣಾ ಮನೋಬಾವದಿಂದ ಕೂಡಿದ್ದ ಪತ್ರಕರ್ತರಾಗಿದ್ದರು ಎಂದು ಜಿ.ಪಂ.ಸದಸ್ಯ ಬಿ.ಎಲ್.ದೇವರಾಜು ತಿಳಿಸಿದರು.
ಕೊರೋನಾ ಮಹಾಮಾರಿಗೆ ಬಲಿಯಾದ ತಾಲ್ಲೂಕಿನ ಮೊದಲ ಪತ್ರಕರ್ತ ಸಿಂ.ಕಾ.ಸುರೇಶ್ ಒಬ್ಬ ಶಿಕ್ಷಕನಾಗಿ, ವ್ಯಾಪಾರಸ್ಥನಾಗಿ, ಗುತ್ತಿಗೆದಾರನಾಗಿ ಕೊನೆಗೆ ಪತ್ರಿಕಾ ರಂಗದಲ್ಲಿ ನೆಲೆಕಂಡುಕೊಳ್ಳುವ ಮೂಲಕ ಸಮಾಜಸೇವೆಗಾಗಿ ಪತ್ರಿಕಾರಂಗದಲ್ಲಿ ತೊಡಗಿಸಿಕೊಂಡು ಹಗಲಿರುಳು ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸಿ ಸಾಕಷ್ಟು ಜನರಿಗೆ ತಿಳುವಳಿಕೆ ಹೇಳಿ ಅವರುಗಳನ್ನು ಸರಿದಾರಿಗೆ ತಂದು ಆಕಸ್ಮಿಕವಾಗಿ ತಾನೇ ಮಹಾಮಾರಿಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಅಪರೂಪದ ವ್ಯಕ್ತಿತ್ವ ಸುರೇಶ್ ರವರದು.ತಾಲ್ಲೂಕು ಪ್ರೆಸ್ ಕ್ಲಬ್ ಅದ್ಯಕ್ಷರಾಗಿ ಕಿರಿಯ ಪರ್ತಕರ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದ ಅವರು ಈಗಷ್ಟೇ ಆಗಸ್ಟ್ 15 ರಂದು ಕೊರೋನಾ ವಾರಿಯರ್ಸ್ ಎಂದು ತಾಲ್ಲೂಕು ಆಡಳಿತದಿಂದ ಸನ್ಮಾನ ಪ್ರಶಸ್ತಿಗಳನ್ನು ಪಡೆದಿದ್ದ ಇವರು ಅದೇ ಮಹಾಮಾರಿಗೆ ಬಲಿಯಾದದ್ದು ವಿಪರ್ಯಾಸ, ಸರ್ಕಾರಗಳು ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ವರದಿಗಾರರಿಗೆ ಸೂಕ್ತ ಭದ್ರತೆ ಒದಗಿಸಬೇಕು, ಅವರ ಕುಟುಂಬಕ್ಕೆ ನೆರವು ನೀಡುವ ಕೆಲಸ ಮಾಡಬೇಕು, ತಾಲ್ಲೂಕು ಹಂತದ ಆಸ್ಪತ್ರೆಗಳಲ್ಲಿ 20 ವೆಂಟಿಲೇಟರ್ ಗಳನ್ನು ಇಡಬೇಕು ಅತೀ ತುರ್ತಾಗಿ ಚಿಕಿತ್ಸೆ ಬೇಕಿದ್ದವರಿಗೆ ವೆಂಟಿಲೇಟರ್ಸ್ ಮೂಲಕ ಚಿಕಿತ್ಸೆ ನೀಡಬೇಕು ಸೂಕ್ತ ಕಾಲದಲ್ಲಿ ಅಗತ್ಯ ಚಿಕಿತ್ಸೆ ಸಿಕ್ಕಿದ್ದರೆ ಸುರೇಶ್ ಖಂಡಿತವಾಗಿಯೂ ಬದುಕುಳಿಯುತ್ತಿದ್ದರು, ಸಂಕಷ್ಟದಲ್ಲಿರುವ ವರದಿಗಾರರಿಗೆ ಪತ್ರಿಕೆಗಳು ಸ್ವಲ್ಪ ಮೊತ್ತದ ಹಣವನ್ನು ಮೀಸಲಿಡಬೇಕು, ವರದಿಗಾರರು ಅಕಾಲಿಕ ಮರಣ ಹೊಂದಿದರೆ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ತಿಳಿಸಿದರು. ರೈತಸಂಘ, ಕರ್ನಾಟಕ ರಕ್ಷಣಾ ವೇದಿಕೆ,ವಿವಿಧ ಪ್ರಗತಿಪರ ಸಂಘಟನೆಗಳು,ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳು ಸುರೇಶ್ ಬಗ್ಗೆ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಹಾಗೂ ಮನ್ಮುಲ್ ನಿರ್ದೇ±ಕ ಹೆಚ್.ಟಿ.ಮಂಜು, ಜಿಪಂ.ಸದಸ್ಯ ರಾಮದಾಸ್, ಜೆಡಿಎಸ್ ತಾಲ್ಲೂಕು ಅದ್ಯಕ್ಷ ಜಾನಕೀರಾಮು ಎ.ಆರ್.ರಘು, ಐನೋರಹಳ್ಳಿ ಮಲ್ಲೇಶ್, ಸಮಾಜಸೇವಕ ಬಿ.ಎಂ.ಕಿರಣ್,ತಾಲ್ಲೂಕು ವೀರಶೈವ ಮಹಾಸಭಾದ ಅದ್ಯಕ್ಷ ಹಾಗೂ ವಕೀಲ ಧನಂಜಯ, ಉಪನ್ಯಾಸಕ ವಾಸು,ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಬಳ್ಳೇಕೆರೆ ಮಂಜುನಾಥ್, ತಾಲ್ಲೂಕು ರೈತಸಂಘದ ಅದ್ಯಕ್ಷ ಮರುವನಹಳ್ಳಿ ಶಂಕರ್, ನಾಗಣ್ಣಗೌಡ, ರಾಜೇಗೌಡ, ಹರಿಚರಣ್ ತಿಲಕ್, ಆನಂದ್, ದಿನೇಶ್, ಬಸವರಾಜು, ಬಲದೇವ್ ರಘು, ಖಲೀಲ್, ಸೇರಿದಂತೆ ಹಲವರು ಹಾಜರಿದ್ದರು.