ಸಿಂಪಿಗೆ 60 ಸಂಘಟನೆಗೆ 40 ವರ್ಷ: ಕಾರ್ಯಸಾಧನೆಗಳ ಕೃತಿ ಬಿಡುಗಡೆ ನಾಳೆ

ಕಲಬುರಗಿ,ಅ.31-ಸಾಹಿತ್ಯ ಸೇವಕ, ಉದಯೋನ್ಮುಖ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೀರಭದ್ರ ಸಿಂಪಿ ಅವರಿಗೆ 60 ಸಂಘಟನೆಗೆ 40 ವರ್ಷ (1980 ರಿಂದ 2010ರವರೆಗೆ) ಕಾರ್ಯಸಾಧನೆಗಳ ಪರಿಚಯ ಕೃತಿ ಬಿಡುಗಡೆ ಸಮಾರಂಭವನ್ನು ಉದಯೋನ್ಮುಖ ಬರಹಗಾರರ ಬಳಗದ ಕೇಂದ್ರ ಸಮಿತಿ ವತಿಯಿಂದ ನ.1 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀಶೈಲಂ ಸಾರಂಗ ಮಠ ಹಾಗೂ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಕೃತಿ ಬಿಡುಗಡೆ ಮಾಡಲಿದ್ದು, ಸೊನ್ನ ಸಿದ್ಧಲಿಂಗೇಶ್ವರ ದಾಸೋಹ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮಿಗಳು ನೇತೃತ್ವವಹಿಸುವರು. ದೈಹಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪ್ರೊ.ಮಲ್ಕಣ್ಣಗೌಡ (ಮಲ್ಲಿಕಾರ್ಜುನ)ಪಾಟೀಲ ನೆಲೋಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಉದಯೋನ್ಮುಖ ಬರಹಗಾರರ ಬಳಗದ ಅಧ್ಯಕ್ಷ ಡಾ.ಪ್ರೇಮಚಂದ ಚವ್ಹಾಣ ಅಧ್ಯಕ್ಷತೆ ವಹಿಸುವರು.
ಸಾಹಿತ್ಯಾಸಕ್ತರು, ಸಿಂಪಿ ಅವರ ಅಭಿಮಾನಿ ಬಳಗ ಸಮಾರಂಭದಲ್ಲಿ ಭಾಗವಹಿಸಲು ಬಳಗದ ಗೌರವಾಧ್ಯಕ್ಷ ಡಾ.ಸೂರ್ಯಕಾಂತ ಪಾಟೀಲ, ಖಜಾಂಚಿ ಸಿದ್ದರಾಮಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.