
ಹೈದರಾಬಾದ್,ಮೇ.೧- ಸಿಂಧೂ ಕಣಿವೆಯ ನಾಗರೀಕತೆ ಆಧರಿಸಿದ ನಿರ್ದೇಶನ ಮಾಡಿ ಎಂದು ಖ್ಯಾತ ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಅವರು ನಿದೇಶಕ ಎಸ್.ಎಸ್ ರಾಜಮೌಳಿ ಅವರಿಗೆ ಮನವಿ ಮಾಡಿದ್ದಾರೆ.
ಭಾರತೀಯ ಇತಿಹಾಸ ಆಧರಿಸಿದ ಚಲನಚಿತ್ರ ನಿರ್ಮಿಸಲು ಹೆಸರುವಾಸಿಯಾಗಿರುವ ರಾಜಮೌಳಿ ಅವರಿಗೆ ಇದೀಗ ಉದ್ಯಮಿ ಆನಂದ್ ಮಹೀಂದ್ರಾ ಹೊಸ ಸಲಹೆ ನೀಡಿದ್ದಾರೆ
ಐತಿಹಾಸಿಕ ಚಿತ್ರಗಳಾದ ಬಾಹುಬಲಿ- ದಿ ಬಿಗಿನಿಂಗ್, ಬಾಹುಬಲಿ- ೨ ಮತ್ತು ಆಸ್ಕರ್-ವಿಜೇತ ಆರ್ ಆರ್ ಆರ್ ಚಿತ್ರಗಳನ್ನು ಹಾಡಿ ಹೊಗಳಿರುವ ಆನಂದ್ ಮಹೀಂದ್ರಾ, ಐತಿಹಾಸಿಕ ಚಿತ್ರಗಳನ್ನು ನಿರ್ಮಾಣ ಮಾಡಿ ಎಂದು ಟ್ವಿಟರ್ ಥ್ರೆಡ್ ಅನ್ನು ಹಂಚಿಕೊಂಡಿದ್ದಾರೆ.
ಸಿಂಧೂ ಕಣಿವೆ ನಾಗರಿಕತೆಯ ಪ್ರಾಚೀನ ನಗರಗಳನ್ನು ಆಧರಿಸಿದ ಚಿತ್ರ ನಿರ್ದೇಶನ ಮಾಡುವ ಯೋಜನೆ ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ. ಇದರ ಜೊತೆಗೆ ಸಿಂಧೂ ಕಣಿವೆ ನಾಗರಿಕತೆಯ ಪ್ರಾಚೀನ ನಗರಗಳನ್ನು ಸುಂದರವಾದ ಫೊ?ಟೋಗಳಲ್ಲಿ ತೋರಿಸುವ ಟ್ವಿಟರ್ ಥ್ರೆಡ್ ಅನ್ನು ಎಸ್‌ಎಸ್ ರಾಜಮೌಳಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
“ಇವು ಇತಿಹಾಸವನ್ನು ಜೀವಂತಗೊಳಿಸುವ ಮತ್ತು ನಮ್ಮ ಕಲ್ಪನೆ ಹುಟ್ಟುಹಾಕುವ ಅದ್ಭುತ ಚಿತ್ರಣಗಳಾಗಿವೆ. ಆ ಪ್ರಾಚೀನ ನಾಗರಿಕತೆಯ ಜಾಗತಿಕ ಜಾಗೃತಿ ಉಂಟುಮಾಡುವ ಆ ಯುಗದ ಆಧಾರದ ಮೇಲೆ ಚಿತ್ರ ಮಾಡಿ ಎಂದು ಕಿವಿ ಮಾತು ಹೇಳೀದ್ದಾರೆ.
ರಾಜಮೌಳಿ ಪ್ರತಿಕ್ರಿಯೆ
ಮಗಧೀರ ಚಿತ್ರ ಮಾಡುವ ಸಮಯದಲ್ಲಿ ಸಿಂಧೂ ಕಣಿವೆ ನಾಗರಿಕತೆಯ ಕುರಿತು ಚಿತ್ರ ಮಾಡಲು ಮುಂದಾಗಿದ್ದೆ. ಆದರೆ ಮಹೆಂಜೋದಾರ್‍ಗೆ ತೆರಳಲು ಪಾಕಿಸ್ತಾನ ಅನುಮಿತಿ ನೀಡಿರಲಿಲ್ಲ ಎಂದು ತೆಲುಗು ನಿರ್ದೇಶಕ ಎಸ್.ಎಸ್ ರಾಜಮೌಳಿ ಹೇಳಿದ್ದಾರೆ.
ಪ್ರಾಚೀನ ನಗರಗಳಾದ ಹರಪ್ಪಾ, ಮೊಹೆಂಜೋದಾರೋ, ಧೋಲಾವಿರಾ, ಲೋಥಲ್, ಕಾಲಿಬಂಗನ್, ಬನವಾಲಿ, ರಾಖಿಗರ್ಹಿ, ಸುರ್ಕೋಟಾಡಾ, ಚಾನ್ಹು ದಾರೋ ಮತ್ತು ರೂಪಾರ್ ಒಳಗೊಂಡು ಚಿತ್ರ ಮಾಡುವ ಆಲೋಚನೆ ಬಂದಿತ್ತು ಎಂದಿದ್ದಾರೆ
ಮಗಧೀರ ಚಿತ್ರದ ಚಿತ್ರೀಕರಣದ ವೇಳೆ, ಪುರಾತನವಾದ ಮರ ನೋಡಿದೆ, ಅದು ಪಳೆಯುಳಿಕೆಯಾಗಿ ಮಾರ್ಪಟ್ಟಿತು. ಸಿಂಧೂ ಕಣಿವೆಯ ನಾಗರಿಕತೆಯ ಉಗಮ ಮತ್ತು ಕುಸಿತದ ಬಗ್ಗೆ ಆ ಮರದ ಮೂಲಕ ನಿರೂಪಿಸಲ್ಪಟ್ಟ ಚಿತ್ರದ ಬಗ್ಗೆ ಯೋಚಿಸಿದೆ ಪಾಕಿಸ್ತಾನಕ್ಕೆ ಕೆಲವು ವರ್ಷಗಳ ಕಾಲ ಭೇಟಿ ನೀಡಿದ್ದೇನೆ. ನಂತರ ಮೊಹೆಂಜೊದಾರೊಗೆ ಭೇಟಿ ನೀಡಲು ತುಂಬಾ ಪ್ರಯತ್ನಿಸಿದೆ, ದುಃಖದಿಂದ ಅನುಮತಿ ನಿರಾಕರಿಸಲಾಯಿತು,” ಎಂದು ಅವರು ಟ್ವೀಟ್ ಮಾಡಿದ್ದಾರೆ.