ಸಿಂಧೂ ಒಪ್ಪಂದ, ನೋಟಿಸ್‌ಗೆ ಪಾಕ್ ಸಮ್ಮತಿ

ಇಸ್ಲಮಾಬಾದ್, ಏ.೭-ಸಿಂಧೂ ಒಪ್ಪಂದದ ಕುರಿತು ಭಾರತದ ನೋಟಿಸ್‌ಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದ್ದು ಸದುದ್ದೇಶದ ಒಪ್ಪಂದ ಅನುಷ್ಠಾನಕ್ಕೆ ಬದ್ದ ಎಂದು ಹೇಳಿದೆ.

ಗಡಿಯಾಚೆಗಿನ ನದಿಗಳ ನಿರ್ವಹಣೆಗಾಗಿ ೧೯೬೦ ರ ಸಿಂಧೂ ಜಲ ಒಪ್ಪಂದದ ಮಾರ್ಪಾಡು ಕೋರಿ ಭಾರತ ಸರ್ಕಾರ ಜನವರಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಪಾಕಿಸ್ತಾನ ದೃಢಪಡಿಸಿದೆ.

“ಸದುದ್ದೇಶದಿಂದ” ಒಪ್ಪಂದದ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ಪಾಕಿಸ್ತಾನ ಹೇಳಿದೆ. “ನಾವು ಪತ್ರವನ್ನು ಪರಿಶೀಲಿಸುತ್ತಿದ್ದೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿನ ಕಿಶನ್‌ಗಂಗಾ ಮತ್ತು ರಾಟ್ಲ್ ಜಲವಿದ್ಯುತ್ ಯೋಜನೆಗಳಿಗೆ ಪಾಕಿಸ್ತಾನದ ಆಕ್ಷೇಪಣೆಗಳನ್ನು ಪರಿಹರಿಸಲು ಪರಸ್ಪರ ಒಪ್ಪಿಗೆ ಮಾರ್ಗವನ್ನು ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನವನ್ನು ವಿಶ್ವಬ್ಯಾಂಕ್ ಕೇಳಿಕೊಂಡಿದ್ದರೂ, ಇಸ್ಲಾಮಾಬಾದ್ ಭಾರತದೊಂದಿಗೆ ಈ ವಿಷಯವನ್ನು ಚರ್ಚಿಸಲು ನಿರಾಕರಿಸಿರುವುದು ಸಂಘರ್ಷಕ್ಕೆ ಕಾರಣವಾಗಿತ್ತು.