ಸಿಂಧುವಾಳ್ ಕ್ರಾಸ್ ಬಳಿ ಬೈಕ್ ಅಪಘಾತ ಓರ್ವ ಸಾವು


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ.30;  ತಾಲೂಕಿನ   ಸಿಂಧವಾಳ್ ಕ್ರಾಸ್ ಬಳಿ ನಿನ್ನೆ ಚಾಲಕನ‌ನಿಯಂತ್ರಣ ತಪ್ಪಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಮತ್ತೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಜಾಲಿಹಾಳ್ ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ (48) ಎಂಬ ವ್ಯಕ್ತಿ ಮೃತ ಪಟ್ಟಿದ್ದಾನೆ. ಶಿವಶಂಕರಗೌಡ (45) ಗಂಭೀರ ಗಾಯಗೊಂಡಿದ್ದು, ನಗರದ ವಿಮ್ಸ್ ಟ್ರಾಮಕೇರ್  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸಚಿವ ನಾಗೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದರು.