ಸಿಂಧುವಳ್ಳಿ ಅತೀ ಒತ್ತಡದ ಮತಗಟ್ಟೆ

ಮೈಸೂರು: ಏ.04:- ಜಿಲ್ಲೆಯಲ್ಲೇ ಅತಿದೊಡ್ಡ ಮತ ಕ್ಷೇತ್ರವಾಗಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಂಧುವಳ್ಳಿ ಗ್ರಾಮ ವ್ಯಾಪ್ತಿಯ ಮೂರು ಮತಗಟ್ಟೆಗಳು ಅತಿ ಹೆಚ್ಚು ಮತದಾರರ ಮೇಲೆ ರಾಜಕೀಯ ನಾಯಕರು ಒತ್ತಡ ಹೇರುವ ಮತಗಟ್ಟೇ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಕಮಲಬಾಯಿ ಹೇಳಿದರು.
ನಗರದ ಚಾಮುಂಡೇಶ್ವರಿ ಮತಗಟ್ಟೆ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ಅತಿದೊಡ್ಡ ಕ್ಷೇತ್ರವಾಗಿದೆ. 337 ಬೂತ್‍ಗಳಲ್ಲಿ 68 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕಳಸ್ತವಾಡಿ(ಮಣಿಪಾಲ್ ಆಸ್ಪತ್ರೆ), ಮೈದನಹಳ್ಳಿ ಚೆಕ್ ಪೆÇೀಸ್ಟ್, ಜೆಕೆ ಟೈರ್ ಫ್ಯಾಕ್ಟರಿ, ಹಾರೋಹಳ್ಳಿ ಚೆಕ್ ಪೆÇೀಸ್ಟ್, ಕಡಕೊಳ ಚೆಕ್ ಪೆÇೀಸ್ಟ್ ಹಾಗೂ ರಮ್ಮನಹಳ್ಳಿ ಚೆಕ್ ಪೆÇೀಸ್ಟ್ ಸೇರಿ 6 ಚೆಕ್‍ಪೆÇೀಸ್ಟ್‍ಗಳಲ್ಲಿ ತಪಾಸಣೆ ನಡೆಯುತ್ತಿದೆ ಎಂದರು.
ಕ್ಷೇತ್ರದಲ್ಲಿ 7 ಫ್ಲೇಮ್ ಸ್ಕ್ವಾಂಡ್ ತಂಡ ಕರ್ತವ್ಯದಲ್ಲಿದೆ. ಅಷ್ಟು ಮಂದಿಗೂ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಲಾಗಿದೆ. ಒಂದು ಚೆಕ್‍ಪೆÇೀಸ್ಟ್‍ಗೆ ಒಬ್ಬರು ಪೆÇಲೀಸ್ ಸಿಬ್ಬಂದಿ, ಇಬ್ಬರು ಚುನಾವಣಾ ಸಹಾಯಕರು ಹಾಗೂ ಚೆಕ್ ಪೆÇೀಸ್ಟ್ ನಲ್ಲೂ ಸಿಸಿಟಿವಿ ಅಳವಡಿಸಲಾಗಿದೆ. ಒಟ್ಟು 34 ಮಂದಿ ಸೆಕ್ಟರ್ ಅಧಿಕಾರಿಗಳಿದ್ದು, ಅಷ್ಟು ಮಂದಿಗೂ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿದ್ದು, ಅವರ ಬಳಿಕ ಆಯಾ ಕಾರ್ಯಕ್ಷೇತ್ರದ ಸಂಪೂರ್ಣ ಮಾಹಿತಿ ಇರಲಿದೆ. ಅವರು, ಇವಿಎಂ ನಿರ್ವಹಣೆ ಯಿಂದ ಎಲ್ಲಾ ರೀತಿಯ ತರಬೇತಿ ಪಡೆದಿರುತ್ತಾರೆಂದರು.
ಇಲವಾಲ ಹೋಬಳಿ 6 ಮಂದಿಯ ತಂಡ, ಆಲನಹಳ್ಳಿ 3ಮಂದಿ, ವಿಜಯನಗರ 3ಮಂದಿ, ಜಯಪುರ 6 ಮಂದಿಯ ತಂಡ ಪೆÇಲೀಸ್ ಪರ್ಸನಲ್ ಟೀಂನಲ್ಲಿ ಎರಡು ಪಾಳಯದಲ್ಲಿ ಕೆಲಸ ನಿರ್ವಹಿಸಲಿದ್ದಾರೆಂದರು. 80 ವರ್ಷ ಮೇಲ್ಪಟ್ಟವರು, ಕೋವೀಡ್ ಪಾಸಿಟಿವ್ ಇರುವವರು ಹಾಗೂ ಬೇರೆಲ್ಲೂ ನಡೆಯಲಾದವರಿಗೆ ಬಿಎಲ್ ಓಗಳ ಮೂಲಕ ಅವರಿಂದಲೇ ಮನೆಯಲ್ಲೇ ಮತದಾನದ ಅನುಮತಿಯನ್ನು ಪಡೆದು ಬಳಿಕ ಅಂಚೆ ಮತದಾನ ಮಾಡಿಸುವುದು ಸಂಪೂರ್ಣ ವಿಡಿಯೋ ಚಿತ್ರೀಕರಣ ಇರಲಿದೆ. ಇನ್ನೂ ಮಹಾರಾಣಿ ಆಟ್ಸ್ ಸೈನ್ಸ್ ಕಾಲೇಜುನಲ್ಲಿ ಇವಿಎಂ ಮಸ್ಟರಿಂಗ್ ಕೇಂದ್ರ ಇರಲಿದೆ ಎಂದು ಹೇಳಿದರು.