
ಆಲಮೇಲ:ಆ.12:ಸಿಂಧುತ್ವ ಪ್ರಮಾಣ ಪತ್ರಕ್ಕೆ ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ತಹಶೀಲ್ದಾರ ಮೂಲಕ ಇಂಡಿ ಉಪವಿಭಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಕರ್ನಾಟಕ ದಲಿತ ಸಂಘóರ್ಷ ಸಮತಿ ಆಲಮೇಲ ಅಧ್ಯಕ್ಷ ಚಂದು ಕೆಳಗಿನಮನಿ ಮಾತನಾಡಿ ಕೇಸ್ ವರ್ಕರ ಮತ್ತು ತಲಾಟಿ ನೌಕರಿಗಾಗಿ ಸಿಂದುತ್ವ ಪ್ರಮಾಣ ಪತ್ರವನ್ನು ನೀಡಲು 4 ಸಾವಿರ ರೂಪಾಯಿಗಳನ್ನು ಕೇಳಿದ್ದಾರೆ ಈ ವಿಷಯದ ಬಗ್ಗೆ ಆಲಮೇಲ ತಹಸೀಲ್ದಾರ ಅವರ ಗಮನಕ್ಕೆ ತಂದರೇ ಬೇಜವಾಜ್ದಾರಿಯಿಂದ ಹೇಳಿಕೆಯನ್ನು ನೀಡುತ್ತಿದ್ದಾರೆ, ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ತಹಶೀಲ್ದಾರ್ ಕಚೇರಿಯ ಮುಂದೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಲಮೇಲ ಪಿಎಸೈ ಕುಮಾರ ಹಾಡಕರ, ಡಿಎಸ್‍ಎಸ್ ಪದಾಧಿಕಾರಿಗಳಾದ ಮಂಜುನಾಥ ಯಂಟಮಾನ, ಹರೀಶ ಯಂಟಮಾನ, ರವಿ ಅಲಹಳ್ಳಿ, ಅಂಬಾದಾಸ ಬಿಳಂಬಗಿ, ಲಕ್ಕಪ್ಪ ಹರಿಜನ, ಬಸವರಾಜ ಹೊಸಮನಿ, ಸಿದ್ದು ಜಮಾದಾರ, ಆಕಾಶ ಯಂಟಮಾನ, ವಿನೋದ ಸೊಡ್ಡಗಿ, ಗಾಲಿಬ ಈಟಿ, ಮಲ್ಲು ಬಿಳಂಬಗಿ, ಆಕಾಶ ರಾಂಪೂರ, ಸೇರಿದಂತೆ ಇತರರಿದ್ದರು.