ಸಿಂಧಿಗೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ


(ಸಂಜೆವಾಣಿ ಪ್ರತಿನಿಧಿಯಿಂದ)
ಕುರುಗೋಡು, ನ.21: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಬೈಲೂರು ಇದರ ಸಹಬಾಗಿತ್ವದಡಿಯಲ್ಲಿ ಕ್ರೀಬ್ಕೋ ಗೊಬ್ಬರ ಸಂಸ್ಥೆಯಿಂದ ಸಿಂಧಿಗೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಹಿರಿಯ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕರಾದ ಅರುಣಚಲಂ, ಪ್ರಾದೇಶಿಕ ವ್ಯವಸ್ಥಾಪಕರಾದ ಮತ್ತು ರಾಮಲಿಂಗಂ, ಹಾಗೂ ಸಂಘದ ಅಧ್ಯಕ್ಷರಾದ ಮಿನಿಗರ ರಾಮೇಶಪ್ಪ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಗರ್ಭಿಣಿ ಸ್ತ್ರೀಯರು, ಶಿಶುಗಳು, ಮಕ್ಕಳು, ವಯೋವೃದ್ಧರು, ಕಣ್ಣಿನ ಪರೀಕ್ಷೆ ಮುಂತಾದ ತಪಾಸಣೆ ಮಾಡುವ ಮೂಲಕ, ಉಚಿತ ಔಷಧ ವಿತರಣೆ ಮಾಡಲಾಯಿತು. ಊರಿನ ಮುಖಂಡರು ಹಾಗೂ ಸಂಘದ ಸರ್ವ ಆಡಳಿತ ಮಂಡಳಿಯ ಸದಸ್ಯರುಗಳು ಪಾಲುಗೊಂಡು ಕಾರ್ಯಕ್ರಮವನ್ನೂ ಯಶಸ್ವಿಗೊಳಿಸಲಾಯಿತು. ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಬಾಬು ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಸುಮಾರು 150ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡಿದ್ದರು