ಸಿಂಧನೂರು ರೈಲ್ವೆ ರಾಯಚೂರಿಗೆ ವಿಸ್ತರಣೆಗೆ ಮನವಿ

(ಸಂಜೆವಾಣಿ ವಾರ್ತೆ)
ರಾಯಚೂರು,ಏ.೧೩- ಸಿಂಧನೂರು ರೈಲ್ವೆ ನಿಲ್ದಾಣ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿರುವ ಹಿನ್ನಲೆ ಸದರಿ ರೈಲ್ವೆ ಕಾಮಗಾರಿಯನ್ನು ರಾಯಚೂರು ನಗರದವರಿಗೆ ವಿಸ್ತರಣೆ ಮಾಡುವಂತೆ ಸಮಾಜ ಸೇವಕ ಡಾ. ಬಾಬುರಾವ ಕೇಂದ್ರ ರೈಲ್ವೆ ಬೋರ್ಡ್ ಚೇರ್ ಮಾನ್ ಜಯವರ್ಮಾರಿಗೆ ಮನವಿ ಸಲ್ಲಿಸಿದ್ದಾರೆ.
ಸಿಂಧನೂರು ರೈಲ್ವೆ ನಿಲ್ದಾಣ ಕಾಮಗಾರಿ ೨೫ ವರ್ಷಗಳ ಕನಸು ನನಸಾಗಿದೆ.ಈಗ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ. ಸಿಂಧನೂರುನಿಂದ ರಾಯಚೂರು ನಗರದವರೆಗೂ ಸದರಿ ರೈಲ್ವೆ ಕಾಮಗಾರಿಯನ್ನು ವಿಸ್ತರಣೆ ಮಾಡುವಂತೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಹಿನ್ನಲೆ ಪ್ರಯಾಣಿಕರ ಹಿತದೃಷ್ಟಿಯಿಂದ ಸದರಿ ರೈಲ್ವೆಯನ್ನು ರಾಯಚೂರು ನಗರದವರಿಗೆ ವಿಸ್ತರಣೆ ಮಾಡುವುದರ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು. ಈ ಭಾಗದ ಜನರು ರಾಜ್ಯ ಸೇರಿ ಅನ್ಯ ರಾಜ್ಯಗಳಿಗೆ ಆಸ್ಪತ್ರೆ ಶಿಕ್ಷಣ ಮತ್ತು ಉದ್ಯೋಗ ಕೂಲಿಕೆಲಸ ಸೇರಿದಂತೆ ಇನ್ನಿತರ ಕೆಲಸ ಕಾರ್ಯಕ್ಕಾಗಿ ತರುಳುತ್ತಾರೆ. ಬಹುತೇಕ ಜನರು ರಾಯಚೂರು ನಗರದಿಂದ ಹುಬ್ಬಳ್ಳಿ ಧಾರವಾಡ ಮತ್ತು ಹೈದ್ರಾಬಾದ್ ಗೆ ತರಳುತ್ತಾರೆ. ಈ ಹಿನ್ನಲೆ ಈ ಭಾಗದ ಜನರ ೨೫ ವರ್ಷಗಳ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಸಿಂಧನೂರು,ಹಿರೇಕೋಟ್ನೆಕಲ್ ಮಾನ್ವಿ ನೀರುಮಾನವಿ ಮತ್ತು ಕಲ್ಲೂರು ಮಾಮದಪೂರು ಮೂಲಕ ರಾಯಚೂರು ವರೆಗೂ ವಿಸ್ತರಣೆ ಮಾಡುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.