ಸಿಂಧನೂರು ಪೋಲಿಸರ ಸಾಹಸಮಯ ಕಾರ್ಯ

ಆಂಧ್ರ ದರೋಡೆ ಕೋರರ ಬಂಧನ ನಗದು ಹಣ, ವಾಹನ ವಶ
ಸಿಂಧನೂರು,ಮಾ.೧೨- ಅನಂತಪುರ ಜಿಲ್ಲೆಯಲ್ಲಿ ದರೋಡೆ ಮಾಡಿ ತಪ್ಪಿಸಿಕೊಂಡು ನಾಲ್ಕು ಕಾರುಗಳಲ್ಲಿ ಓಡಿಹೋಗುವ ಮಾಹಿತಿ ಆಧರಿಸಿ, ಸಿಂಧನೂರು ಪೋಲೀಸರು ತಮ್ಮ ಜೀವದ ಹಂಗು ತೊರೆದು ಅಂತರರಾಜ್ಯ ದರೋಡೆ ಕೋರರನ್ನು ಹಣ ವಾಹನ ಸಮೇತ ೩ ಜನ ದರೋಡೆ ಕೋರರನ್ನು ನಗರದಲ್ಲಿ ಬಂಧಿಸುವ ಮೂಲಕ ಆಂಧ್ರ ಪೊಲೀಸರಿಗೆ ಪ್ರಕರಣ ಭೇದಿಸುವಲ್ಲಿ ಸಿಂಧನೂರು ಪೋಲೀಸರು ಸಹಕರಿಸಿದ್ದಾರೆ.
ಅನಂತಪುರ ಜಿಲ್ಲೆಯಲ್ಲಿ ೧ ಕೋಟಿ ೮೯ ಲಕ್ಷ ಹಣ ದರೋಡೆ ಮಾಡಿಕೊಂಡು, ದರೋಡೆ ಕೋರರು ೪ ಕಾರುಗಳಲ್ಲಿ ತಪ್ಪಿಸಿಕೊಂಡು ಓಡಿಹೋಗುವ ವಿಷಯ ಅನಂತಪುರ ಜಿಲ್ಲಾ ಎಸ್.ಪಿ ಫಕೀರಪ್ಪ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖೀಲ್ ಬಿ. ಗೆ ಮಾಹಿತಿ ನೀಡಿದ್ದು, ಜಿಲ್ಲಾ ಎಸ್ ಪಿ ಆದೇಶದ ಮೇರೆಗೆ ಸಿಂಧನೂರು ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಅಂತರರಾಜ್ಯ ದರೋಡೆ ಕೋರರನ್ನು ನಾಕ ಬಂಧಿ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆ ಕೋರರು ಅನಂತಪುರ ಜಿಲ್ಲೆಯಿಂದ ತಪ್ಪಿಸಿಕೊಂಡು ರಾಯಚೂರು ಜಿಲ್ಲೆಗೆ ಬಂದು ರಾಯಚೂರಿನಿಂದ ಸಿಂಧನೂರು ಕಡೆ ಬರುವ ಮಾಹಿತಿಯನ್ನು ಜಿಲ್ಲಾ ಎಸ್.ಪಿ ಆದೇಶದ ಮೇರೆಗೆ ಸಿಂಧನೂರು ಡಿವೈಎಸ್‌ಪಿ ವೆಂಕಟಪ್ಪ ನಾಯಕ ಸಿಪಿಐ ರವಿಕುಮಾರ, ಪಿ.ಐ.ದುರುಗಪ್ಪ, ಗ್ರಾಮೀಣ ಪೋಲೀಸ್ ಠಾಣೆಯ ಪಿಎಸ್‌ಐ ಮಲ್ಲಿಕ್ ಸಾಹೇಬ ಕಲಾರಿ ಸಿಬ್ಬಂದಿಗಳಾದ ಆದಯ್ಯ ಅನೀಲ್ ಕುಮಾರ ,ಸಂಗನಗೌಡ, ಸಿದ್ಧಪ್ಪ, ವಿಜಯ ಕುಮಾರ, ಶರಬಣ್ಣ, ಅಮರೇಶ, ದ್ಯಾಮಣ್ಣ, ಗೋಪಾಲ, ೬೭೯, ಶೆಟೆಪ್ಪ, ಗೋಪಾಲ, ೯೦, ಅಶೋಕ, ಭಾಷಾ ನಾಯಕ,ಸಂಗಮೇಶ, ಈ ಅಧಿಕಾರಿ ಸಿಬ್ಬಂದಿಗಳ ತಂಡ ನಗರದ PWಆ ಕ್ಯಾಂಪ ಬಳಿ ಡಾಲರ್ಸ್ ಕಾಲೋನಿ ಹತ್ತಿರ ರಾತ್ರಿ ೧೦.೩೦ ಕ್ಕೆ ನಾಕ್ ಬಂದಿ ಮಾಡಿ ೩ ಜನ ಆರೋಪಿಗಳ ಸಮೇತ ೩ ಕಾರುಗಳನ್ನು ಬಂಧಿಸಿದರು.
ಅಷ್ಟರಲ್ಲಿ ಇನ್ನೊಂದು ಕಾರು ತಪ್ಪಿಸಿಕೊಂಡು ಗಂಗಾವತಿ ಕಡೆ ಹೋಗುವ ವಿಷಯವನ್ನು ಗಂಗಾವತಿ ಪೋಲಿಸರಿಗೆ ಮಾಹಿತಿ ನೀಡಿದಾಗ ಮರಳಿ ಹತ್ತಿರ ಇರುವ ಟೋಲ್ ಗೇಟ್ ಬಳಿ ಕಾರನ್ನು ಪೋಲಿಸರು ಇಡಿದು ಹಣ. ಆರೋಪಿ ಸಮೇತ ಕಾರನ್ನು ವಶಕ್ಕೆ ಪಡೆದುಕೊಂಡರು.
೪ ಜನ ದರೋಡೆ ಕೋರರು ಹಣ ಸಮೇತ ೪ ಕಾರುಗಳನ್ನು ಇಡಿದು ಕೊಟ್ಟ ಸಿಂಧನೂರು ಪೋಲಿಸ್ ಅಧಿಕಾರಿಗಳಿಗೆ ಅನಂತಪುರ ಡಿಜಿಪಿ ರಾಜೇಂದ್ರನಾಥ ರೆಡ್ಡಿ, ಜಿಲ್ಲಾ ಎಸ್.ಪಿ ಫಕೀರಪ್ಪ ಅಭಿನಂದಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.