ಸಿಂಧನೂರು ತಾಲೂಕ ಬರಗಾಲ ಪಟ್ಟಿಯಲ್ಲಿ ಸೇರ್ಪಡೆ-ಬಾದರ್ಲಿ

ಸಿಂಧನೂರು.ನ.೦೩- ಮೊದಲೆರಡು ಪಟ್ಟಿಯಲ್ಲಿರದ ಸಿಂಧನೂರನ್ನು ಮೂರನೇ ಸಮೀಕ್ಷೆ ತರುವಾಯ ಕೇಂದ್ರ ಸರ್ಕಾರ ಬರಗಾಲ ಪಿಡಿತ ಪ್ರದೇಶ ಎಂದು ಬರಗಾಲ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆಂದು ಶಾಸಕ ಹಂಪನಗೌಡ ಬಾದರ್ಲಿ ಮಾಹಿತಿ ನೀಡಿದರು.
ನಗರದ ತಹಶಿಲ್ ಕಛೇರಿಯಲ್ಲಿ ಸುದ್ದಿಗೊಷ್ಟಿ ಉದ್ದೇಶಿಸಿ ಮಾತನಾಡುತ್ತಾ ಭೂಮಿಯಲ್ಲಿರುವ ತೇವಾಂಶ ಕೊರತೆ, ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ, ಜೂನ್ ನಿಂದ ಅಕ್ಟೋಬರ್ ವರೆಗೆ ಮಳೆ ಆಗದಿರುವುದು, ಶುಷ್ಕ ವಾತಾವರಣ ,ಬಿತ್ತನೆ ಪ್ರದೇಶ ,ಬೆಳೆ ಹಾನಿ ಸಮೀಕ್ಷೆ ,ಜಲಾಶಯಗಳಲ್ಲಿನ ನೀರಿನ ಪ್ರಮಾಣ, ಅಂತರ್ಜಲ ಮಟ್ಟದ ಸೂಚ್ಯಂಕ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಗಳು ಮೂರನೇ ಪಟ್ಟಿಯಲ್ಲಿ ಒಟ್ಟು ಏಳು (ಸಿಂಧನೂರು ಒಳಗೊಂಡು) ತಾಲುಕ ಗಳನ್ನು ಬರ ಪಿಡಿತ ತಾಲುಕ ಗಳೆಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು ಈ ವರದಿ ಆಧರಿಸಿ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ ತರುವಾಯ ಬರಗಾಲ ಕಾರ್ಯ ನಡೆಯಲಿದೆಂದರು.
ತಹಶಿಲ್ದಾರ ಅರುಣ್ ಕುಮಾರ್ ಮಾತನಾಡಿ, ತಾಲೂಕಿನ ಚಿಕ್ಕಬೇರ್ಗಿ, ಹಿರೇಬೇರ್ಗಿ, ಉಮಲೂಟಿ, ಹೊಗರನಾಳ, ತುರವಿಹಾಳ, ಗೋನ್ವಾರ, ಮುಳ್ಳುರು, ಸಿದ್ರಾಂಪುರ, ಆಯನೂರ, ಯದ್ದಲದೊಡ್ಡಿ, ತಿಮ್ಮಾಪುರ ಆಯ್ದ ಗ್ರಾಮಗಳಲ್ಲಿ ತಲಾ ಐದು ಹೊಲಗಳಲ್ಲಿ ಸರ್ವೆ ಮಾಡಿ ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿದ ಆ?ಯಪ್ ನಲ್ಲಿ ವಾಸ್ತವಿಕತೆಯನ್ನು ಸಮೀಕ್ಷೆ ಮಾಡಲಾಯಿತು ಮತ್ತು ಕಂದಾಯ, ಕೃಷಿ, ತೋಟಗಾರಿಕೆ ಇಲಾಖಾಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಬರ ಕೈಪಿಡಿ ನಮೂನೆ ೧೧ ರಲ್ಲಿ ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಯಿತು ಆ ವರದಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸಿ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆಂದು ಮಾಹಿತಿ ನೀಡಿದರು
ಸರ್ಕಾರ ಬಿಡುಗಡೆಗೊಳಿಸಿದ ಮೊದಲೆರಡು ಬರಗಾಲ ಪಟ್ಟಿಯಲ್ಲಿರದ ಸಿಂದನೂರನ್ನು ಬರಗಾಲ ಪಟ್ಟಿಯಲ್ಲಿ ಕೈ ಬಿಟ್ಟಿದ್ದನ್ನು ಸಿಂಧನೂರು ತಾಲೂಕಿನಲ್ಲಿ ಹಲವಾರು ಮನವಿ,ಪ್ರತಿಭಟನೆ, ರಾಜಕೀಯ ಮುಖಂಡರ ಒತ್ತಡದ ತರುವಾಯ ಮೂರನೇ ಹಂತದ ಸಮೀಕ್ಷೆಯಲ್ಲಿ ಬರಗಾಲ ಪಟ್ಟಿಯಲ್ಲಿ ಸಿಂಧನೂರು ತಾಲುಕನ್ನು ಸೇರ್ಪಡೆ ಮಾಡಲಾಗಿದೆ ಇದು ಹೋರಾಟಕ್ಕೆ ಸಿಕ್ಕ ಪ್ರತಿಫಲ. ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಎ.ಡಿ ನಜಿರ್ ಸಾಬ್, ತಾಂತ್ರಿಕ ಸಹಾಯಕ ಕಳಕಪ್ಪ ಉಪಸ್ಥಿತರಿದ್ದರು.