ಸಿಂಧನೂರು ತಾಲೂಕನ್ನು ಬರಗಾಲ ಪಟ್ಟಿಗೆ ಸೇರಿಸಿ – ಕೆ.ಕರಿಯಪ್ಪ

ಸಿಂಧನೂರು ಅ.೧೬
ನುಡಿದಂತೆ ನಡೆದಿದ್ದೆವೆಂದು ಹೇಳುತ್ತಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಸಿಂಧನೂರನ್ನು ಬರಗಾಲ ಪಟ್ಟಿಗೆ ಸೇರ್ಪಡೆ ಮಾಡಿ ಎಂದು ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ ಒತ್ತಾಯಿಸಿದರು.
ನಗರದ ತಹಶಿಲ್ ಕಛೇರಿ ಮುಂದೆ ರಾಜ್ಯ ಸರ್ಕಾರದ ರೈತ ವಿರೋಧಿ ನಡೆ ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡುತ್ತಾ ಕೆಳ ಭಾಗದ ರೈತರಿಗೆ ಸಂತೃಪ್ತ ವಾಗಿ ನೀರನ್ನು ಒದಗಿಸಬೇಕು ಮತ್ತು ಸಿಂಧನೂರಿನ ಶಾಸಕರು ಎಲ್ಲಿದ್ದಾರೆ ? ಅವರನ್ನು ಹುಡುಕಿ ಕೊಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ .ಅವರನ್ನು ಬೇಟಿ ಯಾಗಲು ಒಂದು ನಿರ್ಧಿಷ್ಟ ಕಛೇರಿ ಇಲ್ಲದಂತೆ ಸಾರ್ವಜನಿಕರು ಪರದಾಡುತ್ತಿದ್ದಾರೆ .ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ೬೪ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದು ಅವರ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಿದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆಗಿಳಿದು ಹೋರಾಟ ಮಾಡಲಾಗುವದೆಂದು ಆಕ್ರೋಶ ಹೊರ ಹಾಕಿದರು.
ರಾಜೇಶ ಹಿರೇಮಠ ಮಾತನಾಡಿ ಲನಾವು ನೀರು ಕೇಳಿದರೆ ಬಾರ್ ಅಂಗಡಿಗಳ ಅನುಮತಿ ಕೊಡುತ್ತಿದ್ದಾರೆ.ಬರಗಾಲ ಘೋಷಣೆ ಕುರಿತು ನಮ್ಮ ತಾಲೂಕಿನ ಸುತ್ತಮುತ್ತಲಿನ ತಾಲೂಕುಗಳು ಬರಗಾಲ ಪಟ್ಟಿಯಲ್ಲಿವೆ ಆದರೆ ಸಿಂದನೂರು ಮಾತ್ರ ಘೋಷಣೆ ಆಗಿಲ್ಲ .ಇದರ ಬಗ್ಗೆ ಶಾಸಕ ಹಂಪನಗೌಡ ಬಾದರ್ಲಿ ಯವರು ರೈತರ ಬಗ್ಗೆ ನಿಷ್ಕಾಳಜಿ ತೊರಿಸುತ್ತಿದ್ದಾರೆ.ಈ ಸಣ್ಣ ಪ್ರಮಾಣ ಹೋರಾಟ ಮುಂದೊಂದು ದಿನ ದೊಡ್ಡ ಪ್ರಮಾಣ ಹೋರಾಟ ಮಾಡಲಾಗುವುದು ಎಂದರು.
ವಿದ್ಯುತ್ ದರ ಏರಿಕೆ ,ಬಿಜೆಪಿ ಸರ್ಕಾರ ಜಾರಿಗೆ ತಂದಂತಹ ಯೋಜನೆಗಳನ್ನು ಸ್ಥಗಿತ ಗೊಳಿಸಿದ ಕಾಂಗ್ರೆಸ್ ಸರ್ಕಾರದ ನಡೆ ,ಅವೈಜ್ಞಾನಿಕ ಲೊಡ್ ಶೆಡಿಂಗ್ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಗಳನ್ನು ಕೂಗುತ್ತಾ ಮನವಿಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಅಮರೇಶಪ್ಪ ಮೈಲಾರ ,ಎಂ.ದೊಡ್ಡ ಬಸವರಾಜ ,ಮದ್ವರಾಜ ಆಚಾರ್ಯ , ಮಲ್ಲಿಕಾರ್ಜುನ ,ನಿರುಪಾದೆಪ್ಪ ಜೋಳದರಾಶಿ ,ಯಲ್ಲೋಸಾ ಬದಿ ,ಹನುಮೇಶ ಸಾಲ್ಗುಂದಾ ,ಯಂಕೋಬ ರಾಮತ್ನಾಳ , ಸಿದ್ದು ಹೂಗಾರ ,ಪ್ರಶಾಂತ ಕಿಲ್ಲೆದ ,ಶರಣು ಗೋರೆಬಾಳ ,ಮಲ್ಲಿಕಾರ್ಜುನ ಜೀನೂರು ,ಶಿವಬಸನಗೌಡ ,ಹನ್ಮಂತ ರಡ್ಡಿ ಹುಡಾ ,ಪ್ರೇಮಾ ಸಿದ್ದಾಂತಿ ಮಠ ,ಮಮತಾ ಹಿರೇಮಠ ,ಜಯಶ್ರೀ ರಡ್ಡಿ ,ನೀಲಾ ಸಂಗಮೇಶ ,ಪರಮೇಶಪ್ಪ ,ಜಡಿಯಪ್ಪ ಹೂಗಾರ ,ರವಿ ಉಪ್ಪಾರ ,ಕೆ.ನಿರುಪಾದಿ ಸುಕಾಲಪೇಟೆ ,ಸುನೀಲ್ ಮೇಸ್ತ್ರೀ ,ಕಲ್ಯಾಣ ,ಶ್ರೀನಿವಾಸ ಮಾಡಶಿರವಾರ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ,ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಭಾಗವಹಿಸಿ ದಿಕ್ಕಾರದ ಘೋಷಣೆ ಗಳನ್ನು ಕೂಗಿ ಮನವಿ ಸಲ್ಲಿಸಿದರು.