ಸಿಂಧನೂರು ಜಿಲ್ಲೆಗಾಗಿ ಉಗ್ರ ಹೋರಾಟ ನಿರ್ಧಾರ

ಸಿಂಧನೂರು,ಜು.೦೯-
ಆರ್ಥಿಕ, ಸಾಮಾಜಿಕ ಶೈಕ್ಷಣಿಕ, ಭೌಗೋಳಿಕವಾಗಿ ಅಭಿವೃದ್ಧಿ ಹೊಂದಿದ ಹಾಗೂ ಕೇಂದ್ರ ಸ್ಥಾನವಾಗಿರುವ ಸಿಂಧನೂರು, ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಶಾಸಕ ಹಂಪನಗೌಡ ಬಾದರ್ಲಿಯವರು ಹೋರಾಟದ ಮುಂದಾಳತ್ವ ವಸಿಕೊಂಡರೆ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಬೆಂಬಲ ನೀಡುವುದಾಗಿ ಸಭೆಯಲ್ಲಿ ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿಸಲು ನಗರದ ಟೌನ್ ಹಾಲ್‌ನಲ್ಲಿ ಕರೆದ ಸಾರ್ವಜನಿಕರ ಸಲಹಾ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಕೀಲರು, ವೈದಾಧಿಕಾರಿಗಳು ಸಾರ್ವಜನಿಕರು, ಜನಪ್ರತಿನಿದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಿಂಧನೂರು ಜಿಲ್ಲೆಯನ್ನಾಗಲು ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಜಿಲ್ಲೆಯಾಗಲು ನಾವು ಉಗ್ರ ವಾದ ಹೋರಾಟ ಮಾಡಲು ಸಿದ್ಧ ಆದ್ದರಿಂದ ತಮ್ಮದೆ ಸರ್ಕಾರ ಇರುವುದರಿಂದ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ತಾಲೂಕಿನ ಜನತೆ ನಿಮ್ಮ ಜೊತೆ ಇರುತ್ತೇವೆ ಹಗಲು ರಾತ್ರಿ ನಿರಂತರ ಹೋರಾಟ ಮಾಡೋಣ ಎಂದು ಶಾಸಕರಿಗೆ ಬೆಂಬಲ ಸೂಚಿಸಿ ವಕೀಲರು, ವೈದಾದಿಕಾರಿಗಳು, ಸಾರ್ವಜನಿಕರು ಸಂಘಸಂಸ್ಥೆಗಳ ಮುಖಂಡರು ಮಾತನಾಡಿದರು.
ಜಿಲ್ಲಾ ನ್ಯಾಯಾಲಯ ಮಂಜೂರಾಗಿದೆ ಇನ್ನು ಸಹಾಯಕ ಆಯುಕ್ತರ ಕಛೇರಿಯೊಂದು ಬಂದರೆ ಸಿಂಧನೂರ ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದುತ್ತದೆ ಸಿರುಗುಪ್ಪ, ಕಾರಟಗಿ, ಕನಕಗಿರಿ, ಮಸ್ಕಿ, ಲಿಂಗಸುಗೂರ ತಾವರಾಗೇರಾ ತಾಲೂಕುಗಳು ಸಿಂಧನೂರಿಗೆ ಹತ್ತಿರವಾಗಿವೆ ಅಲ್ಲದೆ ಕೇಂದ್ರ ಸ್ಥಳವಾಗಿದೆ ಏಷ್ಯಾ ಖಂಡದಲ್ಲಿಯೇ ಟ್ರಾಕ್ಟರ್ ಮಾರಾಟದಲ್ಲಿ ಸಿಂಧನೂರು ಪ್ರಥಮ ಸ್ಥಾನದಲ್ಲಿ ಇದೆ ಹಾಗಾಗಿ ತಾಲುಕಾ ಜಿಲ್ಲಾ ಕೇಂದ್ರವಾಗಲು ಅರ್ಹತೆ ಹೊಂದಿದೆ. ಸರ್ಕಾರ ಜಿಲ್ಲೆಯನ್ನಾಗಿ ಮಾಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ಭಾಗವಸಿದವರು ಮಾತನಾಡಿದರು.
ಸಿಂಧನೂರು ಜಿಲ್ಲೆಯನ್ನಾಗಿ ಮಾಡಲು ಕೆಲವು ಮಾನ ದಂಡಗಳಿವೆ ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ಸಿದ್ಧ ಮಾಡಿಕೊಂಡು ಹೋರಾಟ ಸಮಿತಿ ಮಾಡಿ ಹೋರಾಟ ಸಮಿತಿಯ ನಿಯೋಗ ಹೋಗಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡೋಣ ಇದು ನನ್ನೊಬ್ಬನಿಂದ ಸಾಧ್ಯವಿಲ್ಲ ಸಿಂಧನೂರು ಜಿಲ್ಲೆಯನ್ನಾಗಿ ಮಾಡಲು ವಿವಿಧ ಪಕ್ಷಗಳ ಹಾಗೂ ಸಂಘ ಸಂಸ್ಥೆಗಳು ಮುಖಂಡರು, ಸಾರ್ವಜನಿಕರು ಒಂದಾಗಿ ಪಕ್ಷ ತೀತವಾಗಿ ಹೋರಾಟ ಮಾಡೋಣ ಎಂದು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.
ರವಿಗೌಡ ಮಲ್ಲದಗುಡ್ಡ, ವೈ. ನರೇಂದ್ರನಾಥ, ವಕೀಲರ ಸಂಘದ ಅಧ್ಯಕ್ಷರಾದ ಭೀಮನಗೌಡ ವಕೀಲರು, ವೈದಾಧಿಕಾರಿಗಳ ಪರವಾಗಿ ಡಾ.ಶಿವರಾಜ, ಡಾ.ಬಿ.ಎನ್ ಪಾಟೀಲ, ಕಲಾವಿದರ ಪರವಾಗಿ ವೆಂಕಣ್ಣ ಜೋಷಿ, ಚಿತ್ರ ನಟರಾದ ವಿರೇಶ ನೆಟೆಕಲ್, ಬೀರಪ್ಪ ಶಂಭೋಜಿ, ಮೌನೇಶ ದೊರೆ, ದೇವೇಂದ್ರಗೌಡ, ರಾಮಕೃಷ್ಣ ಬಜಂತ್ರಿ, ಸರ್ಕಾರಿ ಜ್ಯೂನಿಯರ ಕಾಲೇಜ ಪ್ರಾಚಾರ್ಯ ಶಿವರಾಜ, ಮರಿಯಪ್ಪ ಬಿಎಸ್‌ಪಿ, ಹುಸೇನ ಸಾಬ, ಅವಿನಾಶ ದೇಶಪಾಂಡೆ, ವನಸಿರಿ ಅಮರೇಗೌಡ ಮಲ್ಲಾಪುರ, ಚಂದ್ರಶೇಖರ ತಾವರಾಗೇರಾ, ಸೇರಿದಂತೆ ಇತರರು ಮಾತನಾಡಿದರು.