ಸಿಂಧನೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ಶಿವಕುಮಾರ ಜವಳಿ

ಸಿಂಧನೂರು,ಜ.೧೪- ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಶಿವಕುಮಾರ ಜವಳಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಸನಗೌಡ ಬಾದರ್ಲಿ ತಿಳಿಸಿದರು.
ಪಕ್ಷದ ಕಛೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಗ್ರಾಮೀಣ ಬ್ಲಾಕ್ ಕಾಂಗ್ರೇಸ ಅಧ್ಯಕ್ಷರನ್ನಾಗಿ ಶಿವಕುಮಾರ ಜವಳಿಯನ್ನು ನೇಮಕಾತಿ ಮಾಡಿ ಆದೇಶ ಮಾಡಿದ್ದು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿದವರಿಗೆ ಸೂಕ್ತ ಸ್ಥಾನಮಾನವನ್ನು ನೀಡಲಾಗುತ್ತಿದೆ ಎನ್ನುವ ಸಂದೇಶವೆ ಶಿವಕುಮಾರ ಜವಳಿ ನೈಜ ಉದಾಹರಣೆಯಾಗಿದ್ದಾರೆ ಎಂದರು.
ನೂತನ ಅಧ್ಯಕ್ಷರು ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಸಿದ್ದರಾಮಯ್ಯ. ಡಿ.ಕೆ ಶಿವಕುಮಾರ ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ವಿ ನಾಯಕ ಹಾಗೂ ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮಾಡುವಂತೆ ನೇಮಕಾತಿ ಆದೇಶ ಪತ್ರದಲ್ಲಿ ತಿಳಿಸಲಾಗಿದೆ ಎಂದು ಬಸನಗೌಡ ಬಾದರ್ಲಿ ಹೇಳಿದರು.
ಬಸನಗೌಡ ಬಾದರ್ಲಿಯವರು ತಾವು ಬೆಳೆಯುವ ಜೋತೆಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನಗಳನ್ನು ನೀಡುತ್ತಿದ್ದು ಪಕ್ಷ ನನಗೆ ಮಹತ್ವದ ಜವಾಬ್ದಾರಿಯನ್ನು ನೀಡಿದ್ದು ಪಕ್ಷ ಹಾಗೂ ಪಕ್ಷದ ಮುಖಂಡರಿಗೆ ಚ್ಯುತಿ ಬಾರದಂತೆ ನಾನು ನಡೆದುಕೊಂಡು ಪಕ್ಷದಲ್ಲಿರುವ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಪಕ್ಷದ ಬಲವರ್ಧನೆ ಮಾಡುತ್ತೇನೆ ಎಂದು ನೂತನ ಸಿಂಧನೂರ ಗ್ರಾಮೀಣ ಬ್ಲಾಕ್‌ಕಾಂಗ್ರೆಸ್ಸ ಅಧ್ಯಕ್ಷರಾದ ಶಿವಕುಮಾರ ಜವಳಿ ಮಾತನಾಡಿದರು.
ಪಕ್ಷದ ಮುಖಂಡರಾದ ಸೋಮನಗೌಡ ಬಾದರ್ಲಿ, ವೆಂಕಟೇಶ ನಾಯಕ, ಚನ್ನಬಸವ ಕುಂಬಾರ ಅಲಬನೂರ, ಎ,ಎಚ್, ಬಡಿಗೇರ, ಮಹ್ಮದ ಯುನೀಷ ಪಾಷಾ,ಶರಣಯ್ಯ ಸ್ವಾಮಿ ಕೋಟೆ, ಮುಕಪ್ಪ, ಖಾಜಾ ರೌಡಕುಂದ, ಬಾಷಾ ಬಳಗಾನೂರು, ಧಾಧ ಪೀರ್, ಹಂಪಮ್ಮ, ಅಮರೇಶ ಗಿರಿಜಾಲಿ, ಮಲ್ಯಯ್ಯ ನಾಯಕ, ಹಬಿಬ, ಹನುಮಂತ,,ಕೆ. ವೀರುರಾಜು, ಮುನ್ನಾ, ಯಂಕನಗೌಡ, ಸೇರಿದಂತೆ ಇತರರು ಉಪಸ್ತರಿದ್ದರು.