ಸಿಂಧನೂರು ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ ,ಸಾಮಾಜಿಕ ಅಂತರ ಮಾಯಾ

ಸಿಂಧನೂರು.ಡಿ.೩೦- ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಗೆದ್ದ ಅಭ್ಯರ್ಥಿಗಳು ವಿಜಯೊತ್ಸವ ಆಚರಿಸಿದರೆ ,ಸೋತ ಅಭ್ಯರ್ಥಿಗಳು ಸಪ್ಪೆ ಮುಖ ಮಾಡಿಕೊಂಡು ಮತ ಎಣಿಕೆ ಕೇಂದ್ರದಿಂದ ಮನೆಗೆ ತೆರಳಿದ ದೃಶ್ಯ ಸಾಮಾನ್ಯವಾಗಿತ್ತು .
ತಾಲೂಕಿನ ೩೦ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ,ಜೆಡಿಎಸ್,ಬಿಜೆಪಿ ಪಕ್ಷಗಳ ಮುಖಂಡರುಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದು ವಿವಿಧ ಗ್ರಾ.ಪಂಗಳಲ್ಲಿ ಸುಮಾರು ೮೪ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಸೋಮಲಾಪುರ ಗ್ರಾ.ಪ,ಮಲ್ಕಾಪುರ-ಸಗಡಂ ರಾಮು ,ರಾಮತ್ನಾಳ ಗ್ರಾ.ಪ ಬನ್ನಿಗನೂರು ಗ್ರಾ.ಪ
ಮುನ್ನಿಬೇಗಂ, ಹುಚ್ಚಮ್ಮ ,ಲಕ್ಷ್ಮೀ, ಉಮಲೂಟಿ ಗ್ರಾ.ಪ ಬುಕ್ಕನಹಟ್ಟಿ ಸುಂಕಪ್ಪ, ಶರಣಪ್ಪ ಮುಳ್ಳುರೂ .ಯು – ದಯಾನಂದ ,ಹುಲಿಗೆಮ್ಮ .
ಗಾಂಧಿನಗರ ಗ್ರಾ.ಪ ಗಾಂಧಿನಗರ ಗೋಪಿ ನೀಡ ಕೃಷ್ಣ ,ಜವಳಗೇರಾ ಗ್ರಾ.ಪ ಯಂಕಮ್ಮ ,ಅಶೋಕ ,ಮೌಲಸಾಬ, ಮೇರಿ ದುರುಗಪ್ಪ, ಮೌಲಸಾಬ ಶ್ರೀನಿವಾಸ ಕ್ಯಾಂಪ್ ಟಿ.ವೆಂಕಟರಡ್ಡಿ, ಕಾಳಮ್ಮ, ತಿಡಿಗೋಳ ಗ್ರಾ.ಪ ಕುರುಕುಂದಾ- ಅಂಬಣ್ಣ ತಳವಾರ ,ಅನುಷಾ ,ಹೆಡಗಿನಾಳ ಗ್ರಾ.ಪ. ಚಿಂತಮಾನದೊಡ್ಡಿ ನರಸಮ್ಮ ,ದುರಗಪ್ಪ ,ಮಲ್ಲಪ್ಪ.
ಅಲಬನೂರು ಗ್ರಾ.ಪ. ಬೆಳಗೂರ್ಕಿ- ಶಂಕರರಾಯ ,ಬಿ.ರಮೇಶ ರಡ್ಡಿ,ಕನ್ನಾರಿ – ಶಿವಬಸಮ್ಮ, ಉದ್ಭಾಳ ಗ್ರಾ.ಪ. ರಾಜಶೇಖರಪ್ಪ ,ಹೊಸಳ್ಳಿ ಗ್ರಾ.ಪ. ಪಾರ್ವತಿ, ಹನುಮಂತಮ್ಮ, ಅನ್ನಪೂರ್ಣ, ನರಸಮ್ಮ, ಗುಂಜಳ್ಳಿ ಗ್ರಾ.ಪ. ಹೊಸಳ್ಳಿ ಕೆ -ಶರಣಮ್ಮ,ಅಮರೇಶ, ಮಾಡಶಿರವಾರ ಗ್ರಾ.ಪ. ಗೋಮರ್ಸಿ-ರಾಜೇಶ್ವರಿ, ವಿರುಪಾಕ್ಷಿ, ರಾಗಲಪರ್ವಿ- ಬೀಮಣ್ಣ ,ಹನುಮಂತಮ್ಮ.
ವಿರುಪಾಪುರ ಗ್ರಾ.ಪ ಮರನಾಥ ರಾವ್, ಗೋಪಿ ,ರೌಡಕುಂದಾ ಗ್ರಾ.ಪ. ಬಂಗಾರಿ ಕ್ಯಾಂಪ್ -ರಜಿಯಾ ಬೇಗಂ, ಗೋರೆಬಾಳ ಗ್ರಾ.ಪ.
ಲಿಂಗಮ್ಮ, ಮರಿದೇವ, ಲಕ್ಷ್ಮೀ, ವೆಂಕಟ ಲಕ್ಷ್ಮಿ, ಶ್ರೀ ವರ್ದಿನಿ, ರಾಮಕೃಷ್ಣ, ಚೆನ್ನಳ್ಳಿ ಗ್ರಾ.ಪ. ಸಿದ್ರಾಂಪುರ – ರಾಜಮ್ಮ, ಬ್ರಮರಾಯ, ಬಾದರ್ಲಿ ಗಾ.ಪ. ಹರೇಟನೂರು – ನರಸಯ್ಯ ,ದಿಲೀಪ್, ಸುರಾಜ್ ದಾಲಿ, ನರಸಮ್ಮ, ತಿಮ್ಮಾಪುರ-ಗಂಗಮ್ಮ.
ದಡೆಸ್ಗೂರು ಗ್ರಾ.ಪ. ಅಂಬಮ್ಮ, ಉಪಳಪ್ಪ, ಶಾಹಿನಾಜ್ ಬೇಗಂ, ದ್ರಾಕ್ಷಾಯಣಿ, ಕಲ್ಮಂಗಿ -ಗ್ರಾ.ಪ. ಚಿಕ್ಕಭೇರಗಿ ಅಕ್ಕಮ್ಮ, ದೇವಮ್ಮ, ಪಂಪಾಪತಿ, ಗುಂಜಳ್ಳಿ ಗ್ರಾ.ಪ., ಸತ್ಯನಾರಾಯಣ ಕ್ಯಾಂಪ್- ಸಂಗಮೇಶ, ಯಂಕಪ್ಪ, ಹುಸೇನಮ್ಮ.
ಸಿಂದನೂರು ಗ್ರಾಮೀಣ ಅರ್ಜುನ ,ಲಕ್ಷ್ಮೀ ರಾಣಿ ಮಂಡಲ್ ವಿಜೇತ ರಾಗಿದ್ದಾರೆ. ಪತ್ರಿಕೆ ಪ್ರಿಂಟ್ ಹೋಗುವ ಮುನ್ನಾ ವಿಜೇತ ಅಭ್ಯರ್ಥಿಗಳ ಪಟ್ಟಿಯನ್ನು ತಹಶಿಲ್ದಾರ ಯಲ್ಲಪ್ಪ ಸುಬೇದಾರ ಪತ್ರಿಕೆಗೆ ತಿಳಿಸಿದ್ದು ,ಇನ್ನೂ ಉಳಿದ ಗ್ರಾಪ ಮತ ಎಣಿಕೆ ನಡೆಯುತ್ತಿದೆ ಎಂದು ತಿಳಿಸಿದರು.
ಬೆಳಗಿನಿಂದ ನಗರದ ಕುಷ್ಟಗಿ ರಸ್ತೆಯಲ್ಲಿರು ಸರ್ಕಾರಿ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆದಿದ್ದು ವಿವಿಧ ಪಕ್ಷಗಳ ಮುಖಂಡರುಗಳು ಹಾಗೂ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಮುಂದೆ ಜಮಾವಣೆಗೊಂಡಿದ್ದು ಗೆದ್ದ ಅಭ್ಯರ್ಥಿಗಳ ಘೋಷಣೆ ಆಗುತ್ತಿದ್ದಂತೆ ಪಟಾಕಿ ಸಿಡಿಸಿ ,ಕೆಕೆ ಹಾಕಿ ಕುಣಿದು ಕುಪ್ಪಳಿಸಿದರು.
ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಜನರನ್ನು ನಿಯಂತ್ರಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿ.ವಾಯ್.ಎಸ್.ಪಿ ವಿಶ್ವನಾಥ ರಾವ್ ಕುಲಕರ್ಣಿ, ಸಿಪಿಐ ಚಂದ್ರಶೇಖರ ನಾಯಕ, ಪಿಎಸ್‌ಐ ಗಳಾದ ವಿಜಯಕೃಷ್ಣ ,ರಾಘವೇಂದ್ರ, ಹುಲ್ಲಪ್ಪ ರಾಠೋಡ,ಅಗತ್ಯ ಸಿಬ್ಬಂದಿಗಳೊಂದಿಗೆ ಸೂಕ್ತ ಬಂದ್ ಬಸ್ತ ಮಾಡಿದರು.
ಚುನಾವಣೆ ಫಲಿತಾಂಶಕ್ಕಾಗಿ ಮಹಾವಿದ್ಯಾಲಯದ ಮುಂದೆ ಸೇರಿದ್ದ ಅಪಾರ ಸಂಖ್ಯೆಯ ಜನರು ,ಮಾಸ್ಕ ಧರಿಸದೆ ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ನಿಂತುಕೊಂಡಿದ್ದು ಕಂಡು ಬಂತು.