ಸಿಂಧನೂರು ಕೊರೊನಾ ಯುವಕ ಬಲಿ ಆತಂಕ

ಸಿಂಧನೂರು.ಏ.೨೦-ಕೊರೊನಾ ಸೊಂಕಿಗೆ ನಗರದ ಯುವಕ ಬಲಿಯಾಗಿದ್ದು ಅಲ್ಲದೆ ನಗರದಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ನಗರದ ಜನತೆ ಬೆಚ್ಚಿಬಿದ್ದಾರೆ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿ ಕೊರೊನಾ ನಮಗೆ ಸಂಬಂಧವಿಲ್ಲ ಎಂದು ಕಣ್ಣು ಮುಚ್ಚಿ ಕುಳಿತಿದೆ.
ನಗರದ ನಾಮದೇವ ಗೌಡರ ಮಗನಾದ ಮರೇಗೌಡ ವ.೨೫ ಕೊರೊನಾ ಸೋಂಕು ಬಂದು ಬೆಂಗಳೂರುನಲ್ಲಿ ಮರಣಯೊಂದಿದ್ದು ನಗರದಲ್ಲಿ ನಿನ್ನೆ ಅಂತ್ಯಸಂಸ್ಕಾರ ಮಾಡಲಾಗಿತು ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು.
ಎ.೧೭ ರಂದು ೧೨,೧೮ ರಂದು ೨೭,೧೯ ರಂದು ೩,೨೦ ರಂದು ೩೬ ಕೊರೊನಾ ಪಾಸಿಟಿವ್ ಬಂದಿದ್ದು ಇದರಿಂದ ನಗರ ಹಾಗೂ ತಾಲೂಕಿನ ಜನತೆ ಭಯ ಭೀತರಾಗಿದ್ದಾರೆ ಮಾಸ್ಕ್‌ಗಳನ್ನು ಧರಿಸಿ, ಸಮಾಜಿಕ ಅಂತರ ಕಾಪಾಡಿ ಅನಗತ್ಯವಾಗಿ ಹೊರಗೆ ತಿರುಗಾಡಬೇಡಿ ಎಂದು ತಾಲೂಕು ಆಡಳಿತ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡದೆ ಕೊರೊನಾ ನಮಗೆ ಸಂಬಂಧ ಇಲ್ಲ ಎಂದು ಕಣ್ಣು ಮುಚ್ಚಿ ಕುಳಿತ್ತಿರುವದರಿಂದ ಜನ ಬೇಕಾಬಿಟ್ಟಿಯಾಗಿ ಎಲ್ಲಿಂದರಲ್ಲಿ ಅಂಟಿಕೊಂಡು ತಿರುಗಾಡುತ್ತಿದ್ದಾರೆ. ಇದರಿಂದ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನಗರ ಸಭೆ ಅಧಿಕಾರಿಗಳು ಟೀಮಗಳನ್ನು ಮಾಡಿಕೊಂಡು ಅಂಗಡಿ ಮುಗ್ಗಟ್ಟಗಳ ಮೇಲೆ ದಾಳಿ ಮಾಸ್ಕ್ ಇಲ್ಲದ ಸಮಾಜಿಕ ಅಂತರ ಕಪಾಡದ ಅಂಗಡಿ ಮಾಲಿಕರ ಮೇಲೆ ದಂಡ ಹಾಕಿ ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರು ಮತ್ತು ಅಂಗಡಿ ಮಾಲಿಕರಿಗೆ ಜಾಗೃತಿ ಹಾಗು ಎಚ್ಚರಿಕೆ ನೀಡುವ ಕಾರ್ಯ ಮಾಡಲಾಗುತ್ತಿದೆ.
ಜನ ಸಮಾನ್ಯರು ಕೊರೊನಾ ಬಗ್ಗೆ ಜಾಗೃತಿ ವಹಿಸದೆ ನಿರ್ಲಕ್ಷ ಮಾಡಿ ಅನಗತ್ಯವಾಗಿ ಬೇಕಾಬಿಟ್ಟಿಯಾಗಿ ಹೊರಗಡೆ ತಿರುಗಾಡುತ್ತಿದ್ದಾರೆ ಇದರಿಂದ ಕೊರೊನಾ ಹರಡುವ ಲಕ್ಷಣಗಳು ಉಂಟು ಇನ್ನುಮುಂದೆಯಾದರು ತಾಲ್ಲೂಕು ಆಡಳಿತ ಎಚ್ಚರ ಗೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.