ಸಿಂಧನೂರು ಕಾಂಗ್ರೆಸ್ ೩ ಜನ ಆಕಾಂಕ್ಷಿ ಅಭ್ಯರ್ಥಿಗಳು

ಚಿದಾನಂದ ದೊರೆ
ಸಿಂಧನೂರು.ನ.೧೬ -೨೦೨೩ ಸಿಂಧನೂರು ವಿಧಾನ ಸಭೆಯ ಚುನಾವಣೆ ಅದರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗುತ್ತಾರೆಂಬ ಗೊಂದಲ ಪಕ್ಷದ ಕಾರ್ಯ ಕರ್ತರಲ್ಲಿ ಉಂಟಾಗಿದ್ದು ಇನ್ನೂ ವಿರೋಧ ಪಕ್ಷಗಳ ಮುಖಂಡರು ಜಾತಕ ಪಕ್ಷಿಯಂತೆ ಕಾಯ್ದೆ ನೋಡುವಂತಾಗಿದೆ.
ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ನಿಲ್ಲಲು ಮೂರು ಜನ ಸ್ಪರ್ಧೆ ಭಯಸಿ ಅಭ್ಯರ್ಥಿಗಳು ಅರ್ಜಿ ಹಾಕಿದ ಬಗ್ಗೆ ತಿಳಿದುಬಂದಿದೆ ಆದರೆ ಅರ್ಜಿ ಹಾಕಲು ಇನ್ನು ಸಮಯ ಇರುವುದರಿಂದ ಇನ್ನು ಯಾರಾದರೂ ಅರ್ಜಿಗಳನ್ನು ಸಲ್ಲಿಸುತ್ತಾರೆ ಕಾಯ್ದೆ ನೋಡಬೇಕು.
೨೦೨೩ ವಿಧಾನ ಸಭೆಯ ಚುನಾವಣೆ ಕಾಂಗ್ರೆಸ್ ಪಕ್ಷದಲ್ಲಿ ರಂಗೇರಿದ್ದು ಎಂಎಲ್‌ಎ ಯಾಗಲು ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಸನಗೌಡ ಬಾದರ್ಲಿ, ಮಾಜಿ ಕಾರ್ಯದರ್ಶಿಯಾದ ಕೆ.ಕರಿಯಪ್ಪ ಅರ್ಜಿ ಸಲ್ಲಿಸಿದ್ದು ಇದರಿಂದ ಗೊತ್ತಾಗುತ್ತದೆ ಪಕ್ಷದಲ್ಲಿ ಎಲ್ಲವು ಸರಿ ಇಲ್ಲ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವುದು ಈಗ ಭಯಲಾಗಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಾಲ್ಲೂಕಿನಲ್ಲಿ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರನ್ನು ಬಿಟ್ಟರೆ ಬೇರಾರು ಅಭ್ಯರ್ಥಿಯಾಗಿ ನಿಲ್ಲಲು ಮುಂದೆ ಬರುವ ಇಲ್ಲಿ ತನಕ ಧರ್ಯ ಮಾಡಿಲ್ಲ ಆದರೆ ಮುಂದಿನ ವಿಧಾನ ಸಭೆ ಚುನಾವಣೆಗೆ ನಿಲ್ಲಲು ಕೆ.ಕರಿಯಪ್ಪ , ಬಸನಗೌಡ ಬಾದರ್ಲಿ ಸ್ಪರ್ಧ ಭಯಸಿ ಅರ್ಜಿಸಲ್ಲಿಸಿದ್ದು ಇದರಿಂದ ಬಸನಗೌಡ ಬಾದರ್ಲಿ , ಕೆ.ಕರಿಯಪ್ಪ, ಹಂಪನಗೌಡ ಬಾದರ್ಲಿಗೆ ಮಗ್ಗಲು ಮುಳ್ಳಾಗಿದ್ದಾರೆ.
ಹಂಪನಗೌಡ ಬಾದರ್ಲಿ, ಕೆ.ಕರಿಯಪ್ಪ , ಬಸನಗೌಡ ಬಾದರ್ಲಿ ಈ ಮೂವರು ಅರ್ಜಿ ಹಾಕಿದ್ದು ಆದರೆ ಪಕ್ಷದ ಹೈಕಮಾಂಡ ಕೊನೆಗೆ ಯಾರಿಗೆ ಟಿಕೇಟ್ ಕೊಡುತ್ತಿದೆ ಎನ್ನುವುದು ಈಗ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ತೀರ್ವ ಕುತೂಹಲ ಮೂಡಿಸಿದೆ ನಮಗೆ ಟಿಕೇಟ್ ಸಿಕ್ಕರೆ ಉತ್ತಮ ಬೇರೆ ಬಣದವರಿಗೆ ಸಿಕ್ಕರೆ ಮುಂದೇನು ಎಂಬ ಆಲೋಚನೆಯಲ್ಲಿ ಮುಖಂಡರು ತೊಡಗಿದ್ದಾರೆ ಎನ್ನಲಾಗುತ್ತಿದೆ ಯಾರೆ ಏನೆ ಮಾಡಲಿ ಅಂತಿಮವಾಗಿ ಹೈಕಮಾಂಡ ನನಗೆ ಟಿಕೇಟ್ ನೀಡಲು ನಿರ್ಧಾರ ಮಾಡಿದೆ ಚುನಾವಣೆಯಲ್ಲಿ ಗೆಲ್ಲುವ ರಣತಂತ್ರವನ್ನು ಹಂಪನಗೌಡ ಬಾದರ್ಲಿ ಹೇಣೆಯುವ ತೊಡಗಿದ್ದಾರೆ.