ಸಿಂಧನೂರಿನಲ್ಲಿ ಬಿಜೆಪಿ ಬಾವುಟ ಹಾರಿಸುವೆ ಕೊಲ್ಲಾ

ಸಿಂಧನೂರು.ಜೂ.26.ಕೇಂದ್ರ ಮತ್ತು ರಾಜ್ಯದ ಪಕ್ಷದ ಮುಖಂಡ ರು ನನ್ನ ಮೇಲೆ ಭರವಸೆ ಇಟ್ಟು ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ನನಗೆ ಮೂರು ಜಿಲ್ಲೆಯ ಪಕ್ಷ ಸಂಘಟನೆ ಮಾಡಲು ಮತ್ತಷ್ಟು ಜವಾಬ್ದಾರಿ ನೀಡಿದಂತಾಗಿದೆ .ಮುಂದಿನ ವಿಧಾನ ಸಭೆ
ಚುನಾವಣೆಗೆ ಸಿಂಧನೂರಿನಲ್ಲಿ ಪಕ್ಷದ ಬಾವುಟ ಹಾರಿಸುವೆ ಎಂದು ನೂತನ ಕಾಡಾ ಅಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್ ಹೇಳಿದರು.
       ನಗರದ ಗಂಗಾವತಿ ರಸ್ತೆಯಲ್ಲಿ ರುವ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಧಿಕಾರ ಇರಲಿ ಇಲ್ಲದಿರಲಿ ನಾನು ಯಾರಿಗೂ ನೋವನ್ನು ಕೊಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುತ್ತಾ ಬಂದಿದ್ದೇನೆ ಎಂದರು.
   ನಾನು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದು ನನ್ನ ರಾಜಕೀಯ ಗುರುಗಳ ಆದೇಶದ ಮೇರೆಗೆ ಸಿಂಧನೂರು ಬಂದು ಪಕ್ಷ ಸಂಘಟನೆ ಮಾಡುತ್ತಿದ್ದೇನೆ.ಚನ್ನಳ್ಳಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ರಾಗಿ ಕೆಲಸ ಮಾಡಿದ್ದು ಈಗ ಕಾಡಾ
ಅಧ್ಯಕ್ಷನಾಗಿ ರೈತರ ಸೇವೆ ಮಾಡಲು ಸುವರ್ಣಾವಕಾಶ ಒದಗಿಬಂದಿದೆ.ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಹಕಾರದಿಂದ ಕೆಳಭಾಗದ ,ಮೇಲ್ಭಾಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಳ ಭಾಗದ  ರೈತರ ಜಮಿನುಗಳಿಗೆ  ನೀರು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
  ಪಕ್ಷದಲ್ಲಿ ಹುದ್ದೆ ಹಾಗೂ ಅಧಿಕಾರಕ್ಕಾಗಿ ಆಸೆ ಪಟ್ಟು ನಾನು ಹೋಗಿಲ್ಲ.ಪಕ್ಷಕ್ಕಾಗಿ ನಾನು ಸಲ್ಲಿಸಿದ ಸೇವೆ ಪ್ರತಿಫಲವಾಗಿ  ಪಕ್ಷ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದು ರಾಯಚೂರು, ಕೊಪ್ಪಳ, ಬಳ್ಳಾರಿ ಮೂರು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವೆ.ಮುಂಬರುವ ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಕೊಲ್ಲಾ ಶೇಷಗಿರಿರಾವ್ ಕರೆ ನೀಡಿದರು.
  ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡ ರಾದ ಮದ್ವರಾಜ ಆಚಾರ್ಯ,ನಿರುಪಾದಿ ಜೋಳದರಾಶಿ, ಶಿವನಗೌಡ ಗೊರೆ ಬಾಳ, ಹನುಮೇಶ ಸಾಲಗುಂದ,ಪರಮೇಶ ದಡೇಸುಗುರು,ಯಲ್ಲೂ ಸಾ ಬದಿ ,ಸಿದ್ದು ಹುಗಾರ್, ಸತ್ಯನಾರಾಯಣ ದೇಶಪಾಂಡೆ, ಸುಬ್ರಹ್ಮಣ್ಯ, ಶಿವರಾಜ ಪಾಟೀಲ್, ರಾಜಶೇಖರ್ ಹಿರೇಮಠ,ಪ್ರೇಮಾಸಿದ್ಧಾಂತಿಮಠ,ಸುಬ್ಬಾರಾವ್,ಲಿಂಗರಾಜ,ಶ್ರೀನಿವಾಸ ಸೇರಿದಂತೆ ಇತರರು ಹಾಜರಿದ್ದರು.
  ನೂತನ ಕಾಡಾ ಅಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್ ಅವರಿಗೆ ಕಮ್ಮಾವಾರಿ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.ಸಮಾಜದ ಮುಖಂಡರಾದ ನಲ್ಲಾ ವೆಂಕಟೇಶ್ವರ ರಾವ್,ಬಲಸು ಸುಬ್ರಹ್ಮಣ್ಯ, ಮುರಳಿ,ಸೇರಿದಂತೆ ಸಮಾಜದ ಇನ್ನಿತರರು ಇದ್ದರು.