ಸಿಂಧನಕೇರಾ ಗ್ರಾ. ಪಂ.ಸಾಮಾನ್ಯ ಸಭೆ ಅಧ್ಯಕ್ಷ ಪಿಡಿಓ ಮಧ್ಯ ಮಾತಿನ ಚಕಮಕಿ

(ಸಂಜೆವಾಣಿ ವಾರ್ತೆ)
ಹುಮನಾಬಾದ : ಆ.23:ಸಿಂಧನಕೇರಾ ಗ್ರಾಮದಲ್ಲಿ ಎರೆಡನೆ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ನೂತನ ಆಯ್ಕೆ ನಂತರ ಮೊದಲನೇ ಬಾರಿ ನಡೆದ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಸಮಯಕ್ಕೆ ಬರ್ತಾ ಇಲ್ಲ ಜನರು ಬಂದು ಹೋಗುವ ಪರಿಸ್ಥಿತಿ ಇದೆ ಹೀಗಿದ್ರೆ ನಡೆಯಲ್ಲ ದಿನಾಲು ಬರಬೇಕು ಸಮಯಕ್ಕೆ ಬರಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಆಕ್ರೋಶ ವ್ಯಕ್ತಪಡಿಸಿದರು ನನ್ನ ಗಮನಕ್ಕೆ ತರದೇ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸುತಿದ್ದಂತೆ ಮಧ್ಯoತರ ವಹಿಸಿದ ಸದಸ್ಯರು ನಾವು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಲ್ಲ ನಿಮ್ಮನೆ ಕೇಳುತ್ತೀವಿ ಎಂದರು ಕೆಲ ಹೊತ್ತಿನ ಚರ್ಚೆ ನಂತರ ಸಮಾಧಾನ ಗೊಂಡು ಗ್ರಾಮದ ಅಭಿವೃದ್ಧಿ ಚರ್ಚೆಕಡೆಗೆ ತಿರುಗಿ ಬೋರ್ವೆಲ್ ರಿಪೇರ್ ಪದೇ ಪದೇ ಮಾಡಲಾಗುತ್ತಿದೆ ಒಂದೇ ವರ್ಷದಲ್ಲಿ 5ಲಕ್ಷ ಬಿಲ್ ಆಗಿದೆ ಹಾಗಾಗಿ ರಿಪೇರ್ ಮಾಡೋರ್ ನಾ ಮೊದಲು ಬದಲಾವಣೆ ಮಾಡಿ ಬಾಕಿ ಬಿಲ್ ನೀಡಿ ಬೇರೆಯವರ ಕಡೆ ಬೋರ್ ವೆಲ್ ಗಳನ್ನ ರಿಪೇರಿ ಮಾಡಿಸಬೇಕು ಅದೆಂಗೆ ಪದೇ ಪದೇ ಕೆಡುತ್ತವೆ ಎಂದು ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಿದರು,
ಗ್ರಾಮ ಪಂಚಾಯತಿ ಯಲ್ಲಿ ಕೆಲಸ ಮಾಡುತ್ತಿರುವ ವಾಟರ್ ಮೆನ್ ಗೆ ಸುಮಾರು 10 ತಿಂಗಳು ಗಳಿಂದ ಸಂಬಳ ವಿಲ್ಲ ನನಗೆ ಸಂಬಳ ನೀಡಿ ಎಂದು ಸಭೆಯಲ್ಲಿ ಕೇಳಿಕೊಂಡರು ಇಷ್ಟು ತಿಂಗಳು ಗಳಿಂದ ಸಂಬಳ ಇಲ್ಲ ಅದೇಗೆ ಮನೆ ನಡೆಸುತಿದ್ದಿ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಪ್ರಶ್ನಿಸಿ ಅವನ ಸಂಬಳ ತಕ್ಷಣವೇ ನೀಡುವಂತೆ ಹೇಳಿದರು ಆದರೆ ಪಿಡಿಓ ಮಾತ್ರ ಮುಂದಿನ ಸಭೆಯಲ್ಲಿ ವಿಚಾರಿಸೋಣ ಎಂದರು ಸದಸ್ಯರ ಅಧ್ಯಕ್ಷರ ಒತ್ತಾಯ ನಂತರ ಕಾರ್ಮಿಕ ರೊಬ್ಬರೂ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿರುವುದಾಗಿ ತಿಳಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲಾ ಸದಸ್ಯರು ಲೆಟರ್ ಬರೆದು ಸಹಿ ಹಾಕಿ ನೀಡಿದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಂಬಳ ನೀಡುವುದಾಗಿ ತಿಳಿಸಿದರು,
ಕಸ ವಿಲೇವಾರಿ ವಾಹನ ರಿಪೇರಿ
ಈ ಹಿಂದೆ ಕಸವಿಲೇವಾರಿ ವಾಹನ ಮಾಜಿ ಅಧ್ಯಕ್ಷರು ಮತ್ತು ಕೆಲಸದಸ್ಯರು ತಮ್ಮ ವೈಯಕ್ತಿಕವಾಗಿ ಬಳಕೆ ಮಾಡಿದ್ದಾರೆ ಹೀಗಾಗಿ ವಾಹನ ಕೆಟ್ಟು ನಿಂತಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು ವಾಹನ ಹಾಗೆ ಇರಲಿ ಎಂದು ಕೆಲ ಒಬ್ಬರು ಹೇಳುತ್ತಿದ್ದರೆ ಗ್ರಾಮದಲ್ಲಿ ಕೆಲಸಕ್ಕೆ ಬೆಂಕೆಂದು ಕೆಲವರು ಹೇಳುತ್ತಿದ್ದರು ಕೊನೆಗೆ ಎಲ್ಲಾ ಸದಸ್ಯರು ವಾಹನ ರಿಪೇರಿ ಮಾಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು
ಕಾಲುವೆ ಸಮಸ್ಯೆ ವಿಚಾರ
ಗ್ರಾಮದಲ್ಲಿ ಕಾಲುವೆ ಗಳು ಸ್ವಚ್ಛತೆ ಗೊಳಿಸುತಿಲ್ಲ ಯಾವ ವಾರ್ಡ್ ಗೆ ಹೋದರು ಜನ ನಮನ್ನ ಉಗಿಯೂತ್ತಿದ್ದಾರೆ ಎಂದು ಅಧ್ಯಕ್ಷರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಆಯಾ ವಾರ್ಡಿನ ಸದಸ್ಯರು ತಮ್ಮ ವಾರ್ಡ್ ಸ್ವಚ್ಛ ಗೊಳಿಸೋಣ ಎಂದು ಸದಸ್ಯರೊಬ್ಬರು ನಾನು ನನ್ನ ವಾರ್ಡ್ ಕಾಲುವೆ ಸ್ವಚ್ಛ ಗೊಳಿಸುತಿದ್ದೆನೇ ಎಂದರು.
ಕಾರ್ಮಿಕರ ಸಂಬಳ
ಸಭೆಯಲ್ಲಿ 7ಸಾವಿರ ಇದ್ದ ಕಾರ್ಮಿಕರ ಸಂಬಳ 10ಸಾವಿರಕ್ಕೆ ಏರಿಸಿ ಆದೇಶಿಸಲಾಯಿತು
ಪಿಡಿಓ ವಿರುದ್ಧ ಅಧ್ಯಕ್ಷರ ಅಸಮಾಧಾನ
ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸಿಂಧನಕೇರಾ ಗ್ರಾಮದ ಅಧ್ಯಕ್ಷರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಗ್ರಾಮ ಪಂಚಾಯತಿ ಯಲ್ಲೇ ಇರಲ್ಲ ಬರ್ತಾರೆ 30ನಿಮಿಷ ಕೂಡಲ್ಲ ಕಾರು ತೆಗೆದುಕೊಂಡು ಹೋಗ್ತಾರೆ ಕರೆ ಮಾಡಿದ್ರು ಉತ್ತರಿಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಪಂಚಾಯತಿ ಯಲ್ಲಿ ಒಂದು ಫೈಲ್ ಇಡಲ್ಲ ತಮ್ಮ ಜೊತೆಗೆ ತೆಗೆದುಕೊಂಡು ಹೋಗ್ತಾರೆ ಎಂದು ಆರೋಪಿಸಿದ್ದಾರೆ.