
ಹುಮಾನಾಬಾದ್: ಆ.8:ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ತಿಪ್ಪಮ್ಮ ಸಂಕ್ರಯ್ಯ ಸಿಂಧನಕೇರಾ ಅವರು 19 ಮತಗಳಲ್ಲಿ 12 ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ. ರೀಜ್ವಾನಾ ಬೇಗಂ ಖಾಜಾಮಿಯ್ಯ ಹಣಕುಣಿ ಅವರು 19 ಮತಗಳಲ್ಲಿ 12 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿವಕುಮಾರ ರಾಠೋಡ ತಿಳಿಸಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸುಗಂಧಾ ಸನ್ಮಾನಿಸಿದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸಂಗೀತಾ ಚನ್ಮಬಸವಪ್ಪಾ, ಲೀಲಾವತಿ ಮಾಣಿಕರಾವ್, ಸದಸ್ಯರಾದ ಶ್ರೀನಿವಾಸ ರೆಡ್ಡಿ, ಮಹೇಶ್ ಪಾಟೀಲ, ಮಚೇಂದ್ರ ಮಾಣಿಕಪ್ಪಾ, ವಿಶ್ವನಾಥ ಪೆÇಲೀಸ್ ಪಾಟೀಲ, ರವಿ ಮೇತ್ರೆ, ಶೋಭಾವತಿ ಚಂದ್ರಕಾಂತ, ತೇಜಮ್ಮ ಬೀರಪ್ಪಾ, ಮದೀನಾಬೀ ಜಾಫರ್‍ಸಾಬ್, ಉಪಸ್ಥಿತರಿದ್ದರು.