
ವಿಜಯಪುರ, ಮೇ.03: ಜಿಲ್ಲೆಯ ಸಿಂದಗಿ ನಗರದÀ ಕಲ್ಯಾಣ ಮಂಟಪದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ಮಂಗಳವಾರ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ರಾಠೋಡ ಅವರು ನವ ವಧು-ವರರಿಗೆ ಹಾಗೂ ಮದುವೆಗೆ ಆಗಮಿಸಿದ ನೂರಾರು ಜನರಿಗೆ ಕರ ಪತ್ರಗಳನ್ನು ನೀಡಿ, ಮೇ-10ರಂದು ನಡೆಯುವ ಮತದಾನದಲ್ಲಿ ಕಡ್ಡಾಯವಾಗಿ ಮತದಾನ ಮಾಡಲು ತಿಳಿಸಿದರು. ಈ ಸಂದರ್ಭದಲ್ಲಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
80 ವರ್ಷ ಮೇಲ್ಪಟ್ಟ ಹಿರಿಯರಿಂದ ಮತದಾನ :ಸಿಂದಗಿ ತಾಲೂಕು ಕನ್ನೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾನ್ಯ ಸೆಕ್ಟರ್ ಆಫೀಸರ್ ಮತ್ತು ಸಿಂದಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಬಸವರಾಜ್ ಜಿಗಳೂರ ಇವರ ನೇತೃತ್ವದಲ್ಲಿ 80 ವರ್ಷ ಕ್ಕಿಂತ ಮೇಲ್ಪಟ್ಟ ವಯೋಮಾನದ ಮತದಾರರು ಮತ ಚಲಾಯಿಸಿದರು.
ಪಿಆರ್‍ಓ, ಎಪಿಆರ್‍ಓ, ಮೈಕ್ರೋ ಆಬ್ಜರ್ವರ್, ಸಹಾಯಕರು ಮತದಾನ ಸಮಯದಲ್ಲಿ ಹಾಜರಿದ್ದರು.