ಸಿಂದಗಿ ಬಳಿ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲಿಯೇ ಸಾವು, ಸುಟ್ಟು ಕರಕಲಾದ ಬಸ್

ವಿಜಯಪುರ, ಜ.10:ಬೈಕ್ ಹಾಗೂ ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಲ್ಲದೆ
ಬಸ್ ಗೆ ಬೆಂಕಿ ಹೊತ್ತುಕೊಂಡು ಬಸ್ ಸುಟ್ಟು ಕರಕಲು ಆಗಿರುವ ದುರಂತ ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ಬಳಿ ಬುಧವಾರ ಸಂಭವಿಸಿದೆ.
ಬೈಕ್ ಸವಾರನ ಹೆಸರು ತಿಳಿದು ಬಂದಿಲ್ಲ.
ಬೈಕ್ ಬಸ್ ನಡಿ ಸಿಲಿಕಿದ ಕಾರಣ ಬೆಂಕಿ ಹೊತ್ತಿಕೊಂಡಿದ್ದು,
ಬೆಂಕಿ ಹೊತ್ತುತ್ತಿದ್ದಂತೆ ಬಸ್ ನಿಂದ ಪ್ರಯಾಣಿಕರು ಬಸ್ ನಿಂದ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗಬಸಾವಳಗಿ ಬಳಿ ಎನ್ ಎಚ್ 52 ರಲ್ಲಿ
KA 28 F 2469 ನಂಬರಿನ ಸರ್ಕಾರಿ ಬಸ್ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.
ಘಟನೆಯಿಂದ ಎನ್ ಎಚ್ 50 ರಲ್ಲಿ ಕೆಲ ಹೊತ್ತು ಸಂಚಾರ ವ್ಯತ್ಯಯವಾಗಿತ್ತು.
ಬೆಂಕಿ ನಂದಿಸಿದ ಬಳಿಕ ಎಂದಿನಂತೆ ಸಂಚಾರ ಆರಂಭಗೊಂಡಿದೆ.
ಬಸ್ ನಲ್ಲಿದ್ದ ಪ್ರಯಾಣಿಕರು ಬೇರೆ ವಾಹನದಲ್ಲಿ ಪ್ರಯಾಣ ಬೆಳೆಸಿದರು.
ಮೋರಟಗಿಯಿಂದ ಸಿಂದಗಿಗೆ ಬರುತ್ತಿದ್ದ ಬಸ್ ಗೆ ಸಿಂದಗಿಯಿಂದ ಮೋರಟಗಿಯತ್ತ ಹೊರಟಿದ್ದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ.
ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.