ಸಿಂದಗಿ ಉಪಚುಣಾವಣೆಃ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಕಾಂಗ್ರೆಸ್ ಅಭ್ಯರ್ಥಿಗಿಂತ 31088 ಮತಗಳ ಅಂತರದಿಂದ ಆಯ್ಕೆ

ವಿಜಯಪುರ, ನ.3-ಭಾರಿ ಕುತೂಹಲ ಮೂಡಿಸಿದ್ದ ಕರ್ನಾಟಕದ ಉಪಚುನಾವಣೆಯ ಸಿಂದಗಿಯ ಮತ ಎಣಿಕೆ ಇಂದು ಇಲ್ಲಿನ ಸೈನಿಕ್‍ಸ್ಕೂಲ್ ಆವರಣದಲ್ಲಿ ನಡೆದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿಗಿಂತ 31088 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ಭಾಜಪದ ರಮೇಶ ಭೂಸನೂರ ಅವರು 93380 ಮತಗಳನ್ನು ಪಡೆದರೆ, ಕಾಂಗ್ರೆಸ್ಸಿನ ಅಶೋಕ ಮನಗೂಳಿ ಅವರು 62292 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರೆ, ಜೆಡಿಎಸ್ ಅಭ್ಯರ್ಥಿ ಶ್ರೀಮತಿ ನಾಜಿಯಾ ಅಂಗಡಿ ಅವರು 4321 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದು ಸೋಲನ್ನು ಅನುಭವಿಸಿದ್ದಾರೆ.
ಸಿಂದಗಿಯ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 1 ನೇ ಸುತ್ತಿನಿಂದ 12ನೇ ಸುತ್ತಿನವರೆಗೂ ಸತತ ಮುನ್ನಡೆಯನ್ನೆ ಕಾಯ್ದುಕೋಂಡು ಮುನ್ನಡೆ ಸಾಧಿಸಿದ್ದಲ್ಲದೇ
ನಗರದ ಸೈನಿಕ ಶಾಲೆಯಲ್ಲಿ ಸಿಂದಗಿ ಮತಕ್ಷೇತ್ರದ ಉಪಚುಣಾವಣೆ ಮತೆಣಿಕೆಯು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದ್ದು, ಮೊದಲ ಸುತ್ತಿನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿಯವರು 2054 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಯ ಅಭ್ಯರ್ಥಿ ರಮೇಶ ಭೂಸನೂರ ಅವರು 5255 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡರು.
ನಂತರ 2ನೇ ಸುತ್ತಿನಲ್ಲಿ 5390 ಮತಗಳು, 3ನೇ ಸುತ್ತಿನಲ್ಲಿ 3436 ಮತಗಳು, 4ನೇ ಸುತ್ತಿನಲ್ಲಿ 5154 ಮತಗಳು, 5ನೇ ಸುತ್ತಿನಲ್ಲಿ 5079 ಮತಗಳು, 6ನೇ ಸುತ್ತಿನಲ್ಲಿ 4477 ಮತಗಳು, 7ನೇ ಸುತ್ತಿನಲ್ಲಿ 4696 ಮತಗಳು, 8ನೇ ಸುತ್ತಿನಲ್ಲಿ 4534 ಮತಗಳು, 9ನೇ ಸುತ್ತಿನಲ್ಲಿ 4377 ಮತಗಳು, 10ನೇ ಸುತ್ತಿನಲ್ಲಿ 4242 ಮತಗಗಳನ್ನು ಪಡೆದು ನಿರಂತರ ಮುನ್ನಡೆಯನ್ನು ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು ಕಾಯ್ದುಕೋಂಡರು.
ನಿರಂತರ ಮುನ್ನಡೆ ಕಾಯ್ದುಕೊಂಡಿರುವ ಬೂಸನೂರ ಅವರು 11ನೇ ಸುತ್ತಿನಲ್ಲಿ ಒಟ್ಟು 50.050 ಮತಗಳನ್ನು ಪಡೆದರೆ, ಕಾಂಗ್ರೇಸ್ ಅಭ್ಯರ್ಥಿಅಶೊಕ ಮನಗೂಳಿಯವರು 31.473 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 2067 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರ ಅವರು 18.577 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
12ನೇ ಸುತ್ತಿನ ಬಳಿಕ 19,719 ಮತಗಳ ಅಂತರ ಸಾಧಿಸಿದ್ದು, ಗೆಲುವಿನತ್ತ ಮುನ್ನುಗ್ಗುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 54,407 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 34,688 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 2,333 ಮತಗಳನ್ನು ಪಡೆದಿದ್ದಾರೆ.
18ನೇ ಸುತ್ತಿನಲ್ಲಿ ಬಿಜೆಪಿ 80020 ಮತಗಳನ್ನು ಹಾಗೂ ಕಾಂಗ್ರೆಸ್ 52637 ಮತಗಳನ್ನು ಪಡೆದಿದ್ದು, ಬಿಜೆಪಿಯ ರಮೇಶ ಬೂಸನೂರ ಅವರು 27383 ಮತಗಳ ಭಾರಿ ಮುನ್ನಡೆಯನ್ನು ಕಾಯ್ದುಕೊಂಡು ಬಹುತೇಕ ಗೆಲವು ಖಚಿತ ಪಡಿಸಿಕೊಂಡಿದ್ದಾರೆ.
20ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 86222 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 57769 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 3894 ಮತಗಳನ್ನು ಪಡೆದಿದ್ದಾರೆ.
22ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 93380 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62292 ಮತಗಳನ್ನು ಪಡೆದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4321 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಒಟ್ಟು 31088 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಮಾತನಾಡಿದ ಲಕ್ಷ್ಮಣ ಸವದಿಯವರು ಸಿಂದಗಿಯಲ್ಲಿ ಜನ ಅಭಿವೃದ್ಧಿ ಬಯಸಿದ್ದಾರೆ. ಹಾಗಾಗಿ ಜನ ಮತ ಹಾಕಿದ್ದಾರೆ. ನಾವು ಕೂಡ ಭರವಸೆಯನ್ನು ನೀಡಿದ್ದೇವು. ಇದನ್ನು ಜನ ನಂಬಿಕೆ ಇಟ್ಟು ಆಡಳಿತ ಪಕ್ಷಕ್ಕೆ ಮತ ಹಾಕಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ