ಸಿಂದಗಿ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ 55 ಲಕ್ಷ ರೂ.ಗಳ ಅನುದಾನ ನೀಡಿದ ಅರುಣ ಶಹಾಪುರ

ವಿಜಯಪುರ, ಜೂ.2-ಕೊರೊನಾ ಎರಡನೇ ಅಲೆ ಈಗ ಸಾಕಷ್ಟು ಜನರಕನ್ನು ಹೈರಾಣಾಗಿಸಿದೆ. ಅಲ್ಲದೇ, ಸಂಕಷ್ಟಕ್ಕೂ ದೂಡಿದೆ. ಈ ಮಧ್ಯೆ, ಕೊರೊನಾ ಮೂರನೇ ಅಲೆಯ ಆತಂಕವೂ ಎದುರಾಗಿದ್ದು, ಈ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದೂ ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತಮ್ಮ ಸ್ವಂತ ಊರಾದ ಸಿಂದಗಿಗೆ ತಮ್ಮ ಅನುದಾನದಲ್ಲಿ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. 2021-22ನೇ ಆರ್ಥಿಕ ವರ್ಷದಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ರೂ. 55 ಲಕ್ಷ ರೂಪಾಯಿಯನ್ನು ಮಕ್ಕಳ ಆರೋಗ್ಯ ಸಂಬಂಧಿ ಕಾರ್ಯಗಳಿಗೆಗಾ ಬಿಡುಗಡೆ ಮಾಡುವಂತೆ ಅರುಣ ಶಹಾಪುರ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮಕ್ಕಳಿಗಾಗಿ ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಕಟ್ಟ ನಿರ್ಮಾಣ ಸೇರಿದಂತೆ ನಾನಾ ಕಾಮಗಾರಿ ಮತ್ತು ಸಲಕರಣೆ ಖರೀದಿಗಾಗಿ ಅವರು ಯಾವುದಕ್ಕೆ ಎಷ್ಟು ಹಣ ಮೀಸಲಿಡಬೇಕು ಎಂಬುದನ್ನೂ ವಿವರಿಸಿದ್ದಾರೆ.