
ಬೀದರ್: ಮಾ.4:ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಎಸ್.ಆರ್. ಜೋಶಿ ಅವರನ್ನು ಇಲ್ಲಿಯ ಇಂಡಿಯನ್ ಕಾಲೇಜ್ ಆಫ್ ಎಜುಕೇಷನ್ ಫಾರ್ ವುಮೆನ್ಸ್‍ನಲ್ಲಿ ಸನ್ಮಾನಿಸಲಾಯಿತು.
ಕಲಬುರಗಿಯ ಡೆಕ್ಕನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಖುರ್ಷಿದ್ ಖಾನ್ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸತ್ಕರಿಸಿದರು.
ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವವರಿಗೆ ಉನ್ನತ ಹುದ್ದೆಗಳು ಒಲಿದು ಬರುತ್ತವೆ. ಅದಕ್ಕೆ ಜೋಶಿ ಅವರೇ ನಿದರ್ಶನವಾಗಿದ್ದಾರೆ ಎಂದು ಅವರು ಹೇಳಿದರು.
ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.