ಸಿಂಚನ ದೊಡಮನಿಗೆ ಕಿಡ್ನಿ ವೈಫಲ್ಯ: ಸಹಾಯ ಹಸ್ತಕ್ಕಾಗಿ ಮೊರೆ

ವಿಜಯಪುರ,ಮೇ.22: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಮಂಜುನಾಥ ದೊಡಮನಿ ಹಾಗೂ ಲಕ್ಷ್ಮಿ ದೊಡಮನಿ ಅವರ ಪುತ್ರಿ 11 ವರ್ಷದ ಸಿಂಚನ ಕಿಡ್ನಿ ವೈಫಲ್ಯದಿಂದ ತೊಂದರೆಗೀಡಾಗಿದ್ದು, ಅವಳ ವೈದ್ಯಕೀಯ ವೆಚ್ಚಕ್ಕಾಗಿ ಸಾರ್ವಜನಿಕರು, ಸಂಘ- ಸಂಸ್ಥೆ ಮತ್ತು ರಾಜಕಾರಣಿಗಳು ನೆರವಿಗೆ ಬರಬೇಕು ಎಂದು ಬಾಲಕಿಯ ಪೋಷಕರು ಮೊರೆಯಿಟ್ಟಿದ್ದಾರೆ.
ಐದು ವರ್ಷದ ಹಿಂದೆ ಕಿಡ್ನಿ ವೈಫಲ್ಯ ಆಗಿತ್ತು . ಟೆಂಪರರಿ ಡಯಾಲಿಸಿಸ್ ಮಾಡಿ ಕಿಡ್ನಿ ರಿಕವರಿ ಆಗಿತ್ತು. ಸಾಲ ಮಾಡಿ ಚಿಕಿತ್ಸೆ ಕೊಡಲಾಗುತ್ತಿತ್ತು. 2019 ರಿಂದ 2023 ಡಿಸೆಂಬರ್ ತನಕ ಮಾತ್ರೆಗಳ ಮೇಲೆ ಚಿಕಿತ್ಸೆ ನಡೆದಿತ್ತು. ಜನವರಿಯಿಂದ ಡಯಾಲಿಸಿಸ್ ಮಾಡಬೇಕು. ಒಂದು ಸಲ ಡಯಾಲಿಸಿಸ್ ಮಾಡಿಸಿದರೆ ಐದು ಸಾವಿರ ರೂಪಾಯಿ ಖರ್ಚು ಬರುತ್ತದೆ. ಇದೇ ವಾರದಲ್ಲಿ ಎರಡು ಸಲ ಡಯಾಲಿಸಿಸ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ವಾರದಲ್ಲಿ ಒಂದು ಸಾರಿ ಡಯಾಲಿಸಿಸ್ ಮಾಡಿಸುವ ಶಕ್ತಿ ನಮಗೆ ಇಲ್ಲ. ಮೊದಲು ಯಾರ ಬಳಿಯೂ ಸಹಾಯ ಕೇಳದೇ ನಿಭಾಯಿಸಿದ್ದೇವೆ. ಈಗ ಇರುವ ಒಬ್ಬ ಮಗಳು ಬದುಕು ಉಳಿಸಲು ಸಹಾಯಕ್ಕಾಗಿ ತಾವು ಸಾರ್ವಜನಿಕರು, ಸಂಘ – ಸಂಸ್ಥೆ ಹಾಗೂ ರಾಜಕಾರಣಿಗಳ ನೆರವು ಕೋರಿದ್ದೇವೆ ಎಂದು ಬಾಲಕಿ ಪೋಷಕರು ತಿಳಿಸಿದ್ದಾರೆ.
ನಮಗೆ ಜಮೀನು ಇಲ್ಲ. ಕೂಲಿ ಕೆಲಸ ಮಾಡಿ ಬದಕುತ್ತಿದ್ದೇವೆ. ಸಿಂಚನ ನಮ್ಮ ಮಗಳಲ್ಲ. ನಿಮ್ಮ ಮಗಳು ಎಂದು ಭಾವಿಸಿ ದೇವರ ರೂಪದಲ್ಲಿ ಬಂದು ಸಿಂಚಳಿಗೆ ಸಹಾಯ ಮಾಡಬೇಕು ಎಂದು ಪೋಷಕರು ವಿನಂತಿಸಿದ್ದಾರೆ.
ಆರ್ಥಿಕ ಸಹಾಯಕ್ಕಾಗಿ ಸಿಂಚನ ಮಂಜುನಾಥ ದೊಡ್ಡಮನಿ ಫೆÇೀನ್ ಪೇ ನಂಬರ್ 6362497064 ಅಕೌಂಟ್ ನಂಬರ್ 40740303027 IಈSಅ ಛಿoಜe : SಃIಓ0040857 ಆರ್ಥಿಕ ಸಹಕಾರ ನೀಡಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 6362497064 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕು ಎಂದು ಕೋರಲಾಗಿದೆ.