ಸಿಂಘು ಗಡಿ: ರೈತರ ಪ್ರತಿಭಟನೆಗೆ ಎಐಡಿವೈಓ ಬೆಂಬಲ

ಲಿಂಗಸುಗೂರು.ಜ.೯-ರೈತರಿಗೆ ಮಾರಕವಾಗುವ ಹಾಗೂ ರೈತ ವಿರೋಧಿಯಾಗಿರುವ ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಸಿಂಘು ಗಡಿಯಲ್ಲಿ ಸುಮಾರು ತಿಂಗಳುಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಎಐಡಿವೈಓ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳರ ನೇತೃತ್ವದಲ್ಲಿ ಸಂಘಟನೆ ಮುಖಂಡರು ಬೆಂಬಲಿಸಿದರು.
ಅನ್ನದಾತರ ಹೋರಾಟದ ಜೊತೆಗೆ ನಮ್ಮ ಯುವಜನ ಸಂಘಟನೆ ಬೆಂಬಲಿಸುತ್ತಿದೆ. ಕೊನೆಯವರೆಗೂ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಸಂಘಟನೆ ಹೋರಾಟಕ್ಕೆ ನಿಲ್ಲುತ್ತದೆ ಎಂದು ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರನ್ನು ಉದ್ದೇಶಿಸಿ ಸಂಘಟನೆಯ ಅಖಿತ ಭಾರತ ಉಪಾಧ್ಯಕ್ಷ ಜಯೇಶ್ ಪಟೇಲ್ ಮಾತನಾಡಿದರು.
ತಾಲೂಕಿನ ಮುಖಂಡರುಗಳು ರೈತರ ಪ್ರತಿಭಟನಾ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿರುವುದು ರಾಜ್ಯದ ರೈತರಲ್ಲೂ ಹುಮ್ಮಸ್ಸು ಮೂಡಿದಂತಾಗಿದೆ. ಕರ್ನಾಟಕ ರಾಜ್ಯದಿಂದಲೂ ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳು ರೈತರು ತೆರಳುತ್ತಿದ್ದಾರೆ.