ಸಿಂಗಾಪುರ: ಕಾಮುಕ ಶಿಕ್ಷಕನ ಮೇಲೆ ಪೋಕ್ಸೋ ಪ್ರಕರಣ

ಸಿಂಧನೂರು,ಜು.೨೦- ಮನೆಯ ಪಾಠದ ನೆಪದೊಂದಿಗೆ ಮಕ್ಕಳ ಹಾಗೂ ಮಹಿಳೆಯರೊಂದಿಗೆ ಪ್ರಣಯದಾಟ ಯಾಡಿ ಅಶ್ಲೀಲ ವಿಡಿಯೋ ಮಾಡಿದ ಶಿಕ್ಷಕನ ವಿರುದ್ಧ ಈಗ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಪೋಲೀಸ್ ಮೂಲಗಳು ಪತ್ರಿಗೆ ಖಚಿತ ಪಡಿಸುವೆ.
ತಾಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹ್ಮದ ಅಜುರುದ್ದಿನ್ ಕಾಮಪುರಾಣದ ಅಶ್ಲೀಲ ದೃಶ್ಯ ವುಳ್ಳ ವೀಡಿಯೊ ಸಾಮಾಜಿಕ ಜಾಲತಾಣ ಗಳಲ್ಲಿ ಬಾರಿ ಸುದ್ದಿ ಮಾಡಿತ್ತು ಕಾಮುಕ ಶಿಕ್ಷಕ ಅಜುರುದ್ದಿನ್ ಬಗ್ಗೆ ಪತ್ರಿಕೆಯಲ್ಲಿ ವರಧಿ ಮಾಡಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗು ಶಾಸಕರ ಗಮನಕ್ಕೆ ತರಲಾಗಿತ್ತು. ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ವೆಂಕಟರಾವ ನಾಡಗೌಡ ಸಿಂಧನೂರ ಬಿಇಒಗೆ ಖಡಕ್ ಆದೇಶ ಮಾಡಿದ್ದನ್ನು ಸ್ಮರಿಸಬಹುದು.
ವಿಡಿಯೋ ಬಾರಿ ಸುದ್ದಿ ಯಾದ ವಿಷಯ ತಿಳಿದು ಶಿಕ್ಷಕ ಗೋವಾಕ್ಕೆ ಓಡಿ ಹೋಗಿ ತಲೆ ಮರಿಸಿಕೊಂಡಿದ್ದನ್ನು ಕಾರಟಿಗಿ ಪೋಲೀಸರು ಪತ್ತೆ ಹಚ್ಚಿ ಠಾಣೆಗೆ ತಂದು ನಂತರ ಜೈಲಿಗೆ ಕಳುಹಿಸಿದ್ದರು. ಈಗ ಗಂಗಾವತಿಯ ಬಿಇಓ ಸರೇಶಗೌಡ ನೀಡಿದ ದೂರಿನ ಮೇರೆಗೆ ಕಾರಟಿಗಿ ಪೊಲೀಸ್ ಠಾಣೆಯಲ್ಲಿ ಜುಲೈ ೧೬ ರಂದು ಶಿಕ್ಷಕನ ವಿರುದ್ಧ ೧೪೪/೨೦೨೨ ಸೆಕ್ಷನ್ ೮.,೧೨ ಕಾಯ್ದೆ ೨೦೧೨ ರ ಅಡಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಕಾರಟಿಗಿ ಪೋಲೀಸ್ ಠಾಣೆಯ ಪಿಎಸ್‌ಐ ವೀರಭದ್ರಯ್ಯ ಹಿರೇಮಠ ದೂರವಾಣಿ ಮೂಲಕ ಪತ್ರಿಕೆಗೆ ತಿಳಿಸಿದರು.