
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,1- ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ಹುಲಿಗುಡ್ಡದ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಪಂಪ್‌ಹೌಸ್ ಗೆ ಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಇಂದು ಬೆಳಿಗ್ಗೆ ಸೆರೆಹಿಡಿದಿದೆ.
ಆಹಾರ ಹುಡುಕಿಕೊಂಡು ನೀರೆತ್ತುವ ಘಟಕದೊಳಗೆ ನುಗ್ಗಿದೆ ನಂತರ ಹೊರಬರಲಾಗದೆ ಗಾಬರಿಗೊಂಡು ಚಿರತೆ ಘರ್ಜಿಸಿದೆ. ಇದನ್ನು ಕಂಡು ಪಂಪ್ ಹೌಸ್ ನ ನೀರಾವರಿ ಇಲಾಖೆಯ ಸಿಬ್ಬಂದಿ ಯಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವದವರೆಗೂ ನಡೆದ ಕಾರ್ಯಚರಣೆಯಲ್ಲಿ ಜನರ ಕೂಗಾಟದಿಂದ ಹೊರಬಂದ ಚಿರತೆ. ತಪ್ಪಿಸಿಕೊಳ್ಳಲು ಪ್ರಯತ್ನಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿ ಸೆರೆ ಹಿಡಿದಿದೆ.