ಸಾ.ರಾ.ಕನ್ವೆನ್ಶನ್ ರಾಜಕಾಲುವೆ ಮೇಲಿರುವುದು ತನಿಖೆಯಿಂದ ಸಾಬೀತಾದರೆ ರಾಜಕೀಯಕ್ಕೆ ಗುಡ್ ಬೈ

ಮೈಸೂರು, ಜೂ.10: ಸಾ.ರಾ.ಮಹೇಶ್ ಒಡೆತನದಲ್ಲಿರುವ ಸಾ.ರಾ.ಕನ್ವೆನ್ಶನ್ ಸೆಂಟರ್ ರಾಜಕಾಲುವೆ ಮೇಲಿದೆ ಎಂಬುದು ತನಿಖೆಯಿಂದ ಸಾಬೀತಾದರೆ ಸಾರ್ವಜನಿಕರ ಜೀವನಕ್ಕೆ(ರಾಜಕೀಯ ಜೀವನಕ್ಕೆ) ಗುಡ್ ಬೈ ಹೇಳುತ್ತೇನೆ, ಒಂದು ವೇಳೆ ಆರೋಪ ಸುಳ್ಳೆಂದು ಸಾಬೀತಾದರೆ ರೋಹಿಣಿ ಸಿಂಧೂರಿಯವರು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಆಂಧ್ರಕ್ಕೆ ಹೋಗಿ ಮಕ್ಕಳನ್ನು ನೋಡಿಕೊಂಡು ಅಡುಗೆ ಮಾಡಿಕೊಂಡಿರಬೇಕು ಎಂದು ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದರು.
ಸಾ.ರಾ.ಕನ್ವೆನ್ಶನ್ ಸೆಂಟರ್ ರಾಜಕಾಲುವೆ ಮೇಲಿದೆ ಎಂದು ರೋಹಿಣಿ ಸಿಂಧೂರಿಯವರು ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿ ಇಂದು ಪ್ರಾದೇಶಿಕ ಆಯುಕ್ತರ ಕಛೇರಿ ಎದುರು ಪ್ರತಿಭಟನೆ ನಡೆಸಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ 28 ದಿವಸದಲ್ಲಿ ವರ್ಗಾವಣೆ ಮಾಡಿದ ದಿನದಿಂದ ನಾನು ಈ ಜಿಲ್ಲಾಧಿಕಾರಿಯ ವಿರುದ್ಧ ಹೋರಾಟ ಮಾಡುತ್ತಿದ್ದೇನೆ.
ಮುಖ್ಯಮಂತ್ರಿಗಳಿಗೆ, ಮುಖ್ಯಕಾರ್ಯದರ್ಶಿಗಳಿಗೆ, ರಾಜ್ಯಪಾಲರಿಗೆ ಹತ್ತರಿಂದ 11 ಆರೋಪಗಳ ಪಟ್ಟಿ ಸಲ್ಲಿಸಿದ್ದೇನೆ. ನಾನೆಂದೂ ಅವರನ್ನು ವರ್ಗಾವಣೆ ಮಾಡಿ ಎಂದು ಹೇಳಿಲ್ಲ, ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದೆ. ಆದರೆ ಅವರು ನಿನ್ನೆ ಒಂದು ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಶಿಲ್ಪಾ ನಾಗ್ ಹೊರಟ ನಂತರ ಚಾರ್ಜ್ ಕೊಟ್ಟು ಇಲ್ಲಿಂದ ಬೇರೆ ಕಡೆ ಹೋಗಿ ಅವರು ಕೆಲಸ ಮಾಡುತ್ತಿದ್ದಾರೆ. ಇವರು ಇಲ್ಲೇ ಉಳಿದುಕೊಂಡು ದಾಖಲೆ ಬಿಡುಗಡೆ ಮಾಡಿದ್ದಾರೆ. ನಾನು ಸ್ವಾಗತಿಸ್ತೇನೆ ಎಂದರು.
ಸರ್ಕಾರ ತೆಗೆದಿರತಕ್ಕಂತದ್ದು ಅವರ ಆಡಳಿತದ ದುರ್ನಡತೆಯಿಂದ. ಅವರ ಮೇಲಿರತಕ್ಕಂತಹ ಲೋಪಗಳಿಂದ. ಆದರೆ ಅವರು ಈಗ 15ದಿವಸದಿಂದ ಕೆಲವು ಮೇ ತಿಂಗಳಿನಿಂದ ಈಚೆಗೆ ಕೆಲವು ಸಾಮಾಜಿಕ ಜಾಲತಾಣದಲ್ಲಿ ಹಲವು ಅಕೌಂಟ್ ಗಳು ಕ್ರಿಯೇಟ್ ಆಗಿದೆ. ಅದನ್ನು ತೆಗೆದು ನೋಡಿ ನಾನು ಯಾರೋ ಒಬ್ಬ ಆರ್ ಟಿ ಐ ಕಾರ್ಯಕರ್ತ ಅಂತ ಕೊಟ್ಟಂತಹ ಪತ್ರದ ಮೇಲೆ ಈ 15ದಿನದಿಂದ ತನಿಖೆ ಮಾಡುತ್ತಿದ್ದೇನೆ.
ನನ್ನನ್ನು ಭೂ ಒತ್ತುವರಿ ಇರತಕ್ಕಂತಹವರು ವರ್ಗಾವಣೆ ಮಾಡಿಸಿದರು ಎಂದು ಆರೋಪಿಸಿದ್ದರು. ಮೈಸೂರಿನ ಕೆಲವು ರಾಜಕಾರಣಿಗಳು ಅಂತ ಹೇಳುತ್ತಿದ್ದರು. ಆ ಕಾರಣಕ್ಕೆ ನಾನು ಹತ್ತು ಸಾರಿ ಅವರು ಮಾಡಿರತಕ್ಕ ಎಲ್ಲ ದಾಖಲಾತಿಗಳನ್ನು ಬಿಡುಗಡೆ ಮಾಡಿದ್ದೇನೆ. ನಿನ್ನೆ ನಾಲ್ಕು ಡಾಕ್ಯೂಮೆಂಟ್ ರಿಲೀಸ್ ಮಾಡಿ ಮೈಸೂರಿನ ಕೆಲವು ರಾಜಕಾರಣಿಗಳಿಗ ಕಪ್ಪು ಚುಕ್ಕೆಯನ್ನು ಇಡಲಿಕ್ಕೆ ನಾನು ದಕ್ಷ ಅಧಿಕಾರಿ ಅಂತ ಹೇಳಿಕೊಳ್ಳಲಿಕ್ಕೆ ನಾಲ್ಕು ದಾಖಲಾತಿ ಬಿಡುಗಡೆ ಮಾಡಿದ್ದಾರೆ. ಅವು ಕೂಡ ಕಾನೂನು ರೀತಿ ಸರಿಯಾಗಿಯೇ ಇವೆ ಎಂಬುದನ್ನು ಮಾಧ್ಯಮದ ಮುಂದೆ ನೀಡುತ್ತೇನೆ.
ಇನ್ನೊಂದು ಆರೋಪವನ್ನು ಮಾಡಿದ್ದಾರೆ. ನನ್ನ ಒಡೆತನದಲ್ಲಿರತಕ್ಕಂತಹ ಸಾರಾ ಕನ್ವೆನ್ಶನ್ ಸೆಂಟರ್ ಕೂಡ ರಾಜ ಕಾಲುವೆ ಮೇಲಿದೆ ಎಂದು ಹೇಳಿದ್ದಾರೆ. ನಾನು ಇವತ್ತು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. ರೀಜನಲ್ ಕಮೀಷನರ್ ನ್ನು ಒತ್ತಾಯಿಸಿ ಅವರ ಹೇಳಿಕೆ ಸ್ವಾಗತಿಸುತ್ತೇನೆ. ಆದರೆ ನನ್ನ ಒಡೆತನದಲ್ಲಿರತಕ್ಕ ಕಲ್ಯಾಣ ಮಂಟಪವನ್ನು ನಿಮ್ಮ ಉನ್ನತ ಅಧಿಕಾರಿಗಳಿಂದ ಅಳತೆ ಮಾಡಿಸಿ, ರಾಜ ಕಾಲುವೆ ಅಥವಾ ಯಾವುದೇ ಒಂದು ಸಣ್ಣ ಹಳ್ಳದಲ್ಲೂ ಸಹ ನಾನು ಅದನ್ನು ನಿಮರ್ಮಿಸಿದ್ದರೆ ತಕ್ಷಣ ಆ ಕಟ್ಟಡ ಸೇರಿಸಿ ಸಾರ್ವಜನಿಕರ ಉಪಯೋಗಕ್ಕೆ, ಗವರ್ನರ್ ಅವರ ಹೆಸರಿಗೆ ನೋಂದಣಿಯನ್ನು ಮಾಡಿಕೊಡುತ್ತೇನೆ.
ಜೊತೆಗೆ ಈ ಕ್ಷಣದಿಂದ ನನ್ನ ಸಾರ್ವಜನಿಕರ ಜೀವನಕ್ಕೆ ಗುಡ್ ಬೈ ಹೇಳುತ್ತೇನೆ. ಅದನ್ನು ಅಧಿಕಾರಿಗಳು ಕ್ರಮಬದ್ಧವಾಗಿದೆ ಎಂದು ಹೇಳಿದರೆ ಇವರು ಐಎಎಸ್ ನಿಂದ ರಾಜೀನಾಮೆ ಕೊಟ್ಟು ಆಂಧ್ರಕ್ಕೆ ಹೋಗಿ ಮಕ್ಕಳನ್ನು ನೋಡಿಕೊಂಡು ಅಡಿಗೆ ಮಾಡಿಕೊಂಡಿರಬೇಕು ಇದು ನನ್ನ ಒತ್ತಾಯ ಎಂದರು.
ವಿಶ್ವನಾಥ್ ಅವರು ಸಿಎಂನ್ನು ಭೇಟಿ ಮಾಡಿ ಭೂಹಗರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿಯವರನ್ನೇ ವಿಶೇಷಾಧಿಕಾರಿಯಾಗಿ ಮಾಡಲು ಕೇಳಿದ್ದಾರೆಂದ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರಿಂದಲೇ ಸ್ಪೆಶಲ್ ವರದಿ ಮಾಡಿಸಿ ತರಿಸಿ ಅವರೇ ಸಾಬೀತು ಮಾಡಲಿ, ರಾಜಕಾಲುವೆ ಅಂತ ದಾಖಲಾತಿ ಬಿಡುಗಡೆ ಮಾಡಿದರೆ ಅವರೇ ಮಾಡಲಿ ತಪ್ಪೇನು,ಕಾನೂನು ಪ್ರಕಾರ ಇದ್ದರೆ ಬೇರೆ ಬೇರೆ ಮಾಡಲಿಕ್ಕಾಗತ್ತಾ ಎಂದು ಪ್ರಶ್ನಿಸಿದರು.
ನನ್ನ ಒಡೆತನದಲ್ಲಿರತಕ್ಕ ಕನ್ವೆನ್ಶನ್ ಸೆಂಟರ್ ರಾಜಕಾಲುವೆ ಮೇಲಿದೆ ಎಂಬುದು ತನಿಖೆಯಿಂದ ಸಾಬೀತಾಗಬೇಕು, ದಾಖಲಾತಿ ನೀಡಬೇಕು. ಆದರೆ ನಿನ್ನೆ ನೀಡಿದ ನಾಲ್ಕು ದಾಖಲಾತಿಗಳೂ ಕೂಡ ಅಪ್ಪಟ ಸುಳ್ಳು, ಅಷ್ಟು ಕೂಡ ಕಾನೂನು ಪ್ರಕಾರವೇ ಇವೆ. ಅದನ್ನು ಕೂಡ ದಾಖಲಾತಿ ಸಮೇತ ಬಿಡುಗಡೆ ಮಾಡುತ್ತೇವೆ ಆಗ ಅವರ ನಡವಳಿಕೆ ಏನು ಎನ್ನುವುದು ರಾಜ್ಯದ ಜನತೆಗೆ ತಿಳಿಯಲಿದೆ ಎಂದರು.
ಇನ್ ಕಂ ಟ್ಯಾಕ್ಸ್‍ನಲ್ಲಿ, ಪ್ರತಿ ಹಂತದಲ್ಲಿ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುವಾಗ ನನ್ನೆಲ್ಲ ದಾಖಲಾತಿಗಳನ್ನು ನಾಲ್ಕು ಚುನಾವಣೆಯಲ್ಲಿ ಕೂಡ ನನಗೆ ಹೇಗೆ ಬಂತು ಹೇಗೆ ಖರೀದಿಸಿದೆ ಎಂಬುದನ್ನು ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.