ರಾಯಚೂರು,ಜೂ.೦೨-
ಸಿಂಧನೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕವಿ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಅವರಿಗೆ ೨೦೨೩ ನೇ ಸಾಲಿನ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿಯನ್ನು ದಿನಾಂಕ.೦೪.೦೬.೨೦೨೩ ರಂದು ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಸಾಹಿತಿ ಡಾ ಶಿವುಕುಮಾರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕುಡದರಹಾಳು ಗ್ರಾಮದ ಶ್ರೀ ತಾಯಮ್ಮ ದೇವಿ ಜನಸೇವಾ ಹಾಗೂ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ) ಡಾ.ಪಂ. ಪುಟ್ಟರಾಜ ಗವಾಯಿಗಳ ಕಲಾ ಸಂಘ (ರಿ) ವತಿಯಿಂದ ದಿನಾಂಕ ಜೂನ್ ೪.೫.೬.೭.ಮತ್ತು ೮ ನೇ ೨೦೨೩ ರಂದು ನಡೆಯುವ ಜಾತ್ರಾ ಮಹೋತ್ಸವ ಸವಿನೆನಪಿಗಾಗಿ ಡಾ ಪಂ ಪಂಚಾಕ್ಷರಿ ಗವಾಯಿಗಳ ಪ್ರಶಸ್ತಿ, ಡಾ.ಪಂ. ಪುಟ್ಟರಾಜ ಗವಾಯಿಗಳ ಪ್ರಶಸ್ತಿ, ಹಾಗೂ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿಯನ್ನು ಕೊಡಮಾಡಲಾಗುವುದು ಎಂದು ತಿಳಿಸಿದರು.