
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.03: ಮಾರ್ಚ್ 6 ಮತ್ತು 7ರಂದು ನಗರದಲ್ಲಿ ನಡೆಯಲಿರುವ ಗಂಗಾವತಿ ತಾಲ್ಲೂಕುಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶಾಸಕ ಪರಣ್ಣ ಮುನವಳ್ಳಿ ಹಾಗೂ ಕಸಾಪದ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಇಲ್ಲಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ನಡೆದಿದ್ದು ಸಮ್ಮೇಳನದ ನೇತೃತ್ವ ವಹಿಸಿಕೊಂಡಿರುವ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಶಾಸಕ ಪರಣ್ಣ ಮುನವಳಿ, ಸಮ್ಮೇಳದ ವೇದಿಕೆಯಲ್ಲಿ ಸುಮಾರು 100 ಜನ ಕೂರಬಹುದಾದ ವಿಶಾಲ ವೇದಿಕೆ ನಿರ್ಮಾಣ ಮಾಡಲಾಗುತಿದೆ. ವೇದಿಕೆಯ ಮಂಭಾಗದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಪ್ರತ್ಯೇಕ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ.
ಮತ್ತೊಂದು ಬದಿಯಲ್ಲಿ ಗಣ್ಯರಿಗಾಗಿ ನೂರು ಆಸನಗಳ ಮತ್ತೊಂದು ಗ್ಯಾಲರಿ ಮಾಡಲಾಗುತ್ತಿದೆ. ವೇದಿಕೆಯ ಮುಂಭಾಗದಲ್ಲಿ ಸುಮಾರು ಮೂರು ಸಾವಿರ ಜನ ಕುಳಿತು ಏಕಕಾಲಕ್ಕೆ ಸಮ್ಮೇಳನ ಆಸ್ವಾದಿಸಲು ಕುರ್ಚಿಗಳನ್ನು ಹಾಕಲಾಗುತ್ತಿದೆ.
ಕಾಲೇಜಿನ ಆವರಣದಲ್ಲಿ 30 ಮಳಿಗೆ ಹಾಕಲಾಗುತ್ತಿದ್ದು, ಪುಸ್ತಕ, ವಿವಿಧ ವಸ್ತು ಪ್ರದರ್ಶನ, ಕರಕುಶಲ ಮಳಿಗೆ ಇರಲಿವೆ. ವಿವಿಧ ಇಲಾಖೆಯಿಂದಲೂ ಮಳಿಗೆ ಹಾಕಲಾಗುತ್ತಿದೆ. ಮಾರ್ಚ್ 6ರಂದು ಸಮ್ಮೇಳನ ಉದ್ಘಾಟನೆಯಾಗಲಿದೆ.
ಅದಕ್ಕೂ ಮುಂಚೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಇರಲಿದೆ. ಬೆಳಗ್ಗೆ ಒಂದು ಸಾವಿರ ಜನರಿಗೆ ಉಪಹಾರ, ಮಧ್ಯಾಹ್ನ ಐದು ಸಾವಿರ ಜನರಿಗೆ ಸಿಹಿ, ರೊಟ್ಟಿ, ಪಲ್ಯ, ಅನ್ನ-ಸಾಂಬಾರು, ಮಜ್ಜಿಗೆ ಇರಲಿದೆ. ರಾತ್ರಿ ಮೂರು ಸಾವಿರ ಜನರಿಗೆ ಅನ್ನಸಾಂಬಾರು, ಮಜ್ಜಿಗೆ ಇರಲಿದೆ.
ಮಾರನೇ ದಿನ ಅಂದರೆ ಸಮ್ಮೇಳನದ ಎರಡನೇ ದಿನ ಬೆಳಗ್ಗೆ ಒಂದು ಸಾವಿರ ಜನರಿಗೆ ಉಪಹಾರ, ಮಧ್ಯಾಹ್ನ ಮೂರು ಸಆವಿರ ಜನರಿಗೆ ಸಿಹಿ, ರೊಟ್ಟಿ, ಕಾಳು, ಅನ್ನ-ಸಾಂಬಾರು, ಮಜ್ಜಿಗೆ ಹಾಗೂ ರಾತ್ರಿ ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆ ಇರಲಿದೆ ಎಂದರು.
ಈಗಾಗಲೆ ಸಮ್ಮೇಳನದ ತಯಾರಿ ಭರದಿಂದ ಸಾಗಿದ್ದು, ಸಕಲ ವ್ಯವಸ್ಥೆಗಳಾಗುತ್ತಿವೆ. ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗುವುದು. ನಾನು-ನುಡಿಯ ಬಗ್ಗೆ ಕಳಕಳಿ ಇರುವ ಎಲ್ಲರೂ ಸಮ್ಮೇಳನದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶ್ರೀನಿವಾಸ ಅಂಗಡಿ, ರಮೇಶ ಕುಲಕಣರ್ಿ, ರುದ್ರೇಶ
…