ಸಾಹಿತ್ಯ ಸಮ್ಮೇಳನ ಮಹಿಳೆಯರಿಗೆ ಸ್ಪೂರ್ತಿ: ವಿ.ಸಿ. ನಾಗಠಾಣ

ವಿಜಯಪುರ:ಡಿ.28:ವಿಜಯಪುರ ಜಿಲ್ಲಾ ಎರಡನೇ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಮಹಿಳಾ ಸಾಹಿತ್ಯ ಕೃಷಿ ಮಾಡಲು ಮಹಿಳಾ ಸಾಹಿತಿಗಳಿಗೆ ಸ್ಪೂರ್ತಿ ನೀಡುತ್ತದೆ. .ಜಿಲ್ಲೆಯಲ್ಲಿ ವಿಫುಲವಾಗಿ ಬೆಳೆಯಲು ಮಹಿಳಾ ಸಾಹಿತಿಗಳಿಗೆ ಈ ಸಮ್ಮೇಳನ ಉಪಯುಕ್ತವಾಗಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ ಸಿ ನಾಗಠಾಣ ಅಭಿಪ್ರಾಯ ವ್ಯಕ್ತಪಡಿಸಿದರು.

ಬುಧವಾರ ಮಧ್ಯಾಹ್ನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಎರಡನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿ. ಜಿಲ್ಲೆಯಲ್ಲಿ ಪ್ರತಿಭಾವಂತ ಮಹಿಳಾ ಸಾಹಿತಿಗಳನ್ನು ಗುರುತಿಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿಗಿದೆ. ಈ ನಿಟ್ಟಿನಲ್ಲಿ ಎರಡನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲತೆಗೆ ಎರಡನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಮಹಿಳಾ ಸಾಹಿತಿಗಳನ್ನು ಗುರುತಿಸಿ ವೇದಿಕೆಯ ಕಲ್ಪಿಸುವ ಈ ಅರ್ಥಪೂರ್ಣವಾದ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಲಿದೆ ಎಂದರು.

ಗೌರವ ಕೋಶಾಧ್ಯಕ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಸಮ್ಮೇಳನದ ಬಹುತೇಕ ಸಿದ್ದತೆ ಕೊನೆಯ ಹಂತದಲ್ಲಿದೆ. ಉಳಿದುಕೊಂಡಿರುವ ಸಾಹಿತಿಗಳಿಗೆ ಮುಂದಿನ ಸಮ್ಮೇಳನದಲ್ಲಿ ಪ್ರಾಧ್ಯಾನತೆ ನೀಡಲಾಗುವದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸ್ಥಳೀಯ ಸಂಪನ್ಮೂಲದಿಂದ ಈ ಸಮ್ಮೇಳನ ಮಾಡುತ್ತಿದೇವೆ. ನಿರೀಕ್ಷೆಗೆ ಮೀರಿ ಬೆಂಬಲ ವ್ಯಕ್ತವಾಗಿದೆ ಎಂದರು.

ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ. ಸಹ ಕಾರ್ಯದರ್ಶಿ ಕಮಲಾ ಮುರಾಳ. ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ. ಬಸವನ ಬಾಗೇವಾಡಿ ಅಧ್ಯಕ್ಷ ಶಿವಾನಂದ ಡೋಣೂg,À ಪದಾಧಿಕಾರಿಗಳಾದ ವಿಜಯಲಕ್ಮೀ. ಚೈತನ್ಯ ಮುದ್ದೇಬಿಹಾಳ. ರಾವತ ತಳಕೇರಿ, ಎಸ್.ಬಿ. ದಳವಾಯಿ. ಸತೀಶ ಅಡವಿ. ಶಾಮಲು ದೊಡಮನಿ. ರಾಜು ಅಂಗಡಿ, ಅಜುಈನ ಶಿರೂರ, ಆಶೀಫ ಬಾಗಾಯತ ಮುಂತಾದವರು ಉಪಸ್ಥಿತರಿದ್ದರು.